ಲೋಕಾಯುಕ್ತ ಎಸ್ಪಿ ಹನುಮಂತರಾಯ ಸಲಹೆ
ಮೂಡಲಗಿ: ತೋಟಗಾರಿಕೆಯಲ್ಲಿ ವಿಪುಲ ಅವಕಾಶಗಳಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಅರಬಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಹಾಗೂ ವಿದ್ಯಾರ್ಥಿ ನಿಲಯಗಳ 2022-23ರ ವಾರ್ಷಿಕೋತ್ಸವ ಸಮಾರಂಭವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಕೆ.ನಾವಲಗಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿಯ ಶಿಕ್ಷಣ ನಿರ್ದೇಶಕ ಡಾ. ಎನ್.ಕೆ. ಹೆಗಡೆ, ಕುಲಸಚಿವ ಡಾ. ಟಿ.ಬಿ. ಅಳ್ಳೊಳ್ಳಿ ಮಾತನಾಡಿ, ಕೌಶಲ ವೃದ್ಧಿಸುವ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ರಾಮಚಂದ್ರ ನಾಯಕ ಮಾತನಾಡಿ, ಕಲಿಕೆ ಜತೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಾಧನೆ ಮಾಡಬೇಕು. ಈ ವರ್ಷದಿಂದ ಅತ್ಯುತಮ ಕ್ರೀಡಾಪಟು ವಿದ್ಯಾರ್ಥಿಗೆ ಬಂಗಾರದ ಪದಕ ನೀಡಲಾಗುವುದು ಎಂದರು.
ಲೋಕಾಯುಕ್ತ ಎಸ್.ಪಿ ಹನುಮಂತರಾಯ ಅವರು ಪ್ರಸಕ್ತ ಸಾಲಿನ ಸ್ಮರಣ ಸಂಚಿಕೆ ‘ಅಭ್ಯುದಯ’ ಬಿಡುಗಡೆಗೊಳಿಸಿದರು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು. ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಅಧ್ಯಕ್ಷತೆ ವಹಿಸಿದ್ದರು. ವಸತಿ ನಿಲಯದ ನಿಲಯಪಾಲಕರಾದ ಡಾ. ಎಸ್.ಜಿ. ಪ್ರವೀಣಕುಮಾರ, ಡಾ. ರೇಣುಕಾ ಹಿರೇಕುರುಬರ, ಸಿಬ್ಬಂದಿ ಸಲಹೆಗಾರರಾದ ಡಾ. ಕಾಂತರಾಜು ವಿ. ಡಿಪ್ಲೊಮಾ ಸಂಯೋಜನಾಕಾರಿ ಡಾ. ವಿ.ಡಿ.ಗಸ್ತಿ, ರೇಷ್ಮಾ ಕೆ., ವಿಠ್ಠಲ ಗುಗರನಟ್ಟಿ, ಜಂಟಿ ಸಯ್ಯದ ನದಾಫ್, ಜ್ಯೋತಿ ಬ. ಬೆಳವಣಿಕಿ, ಪದಾಕಾರಿಗಳಾದ ಆನಂದ ಬುರುಡ, ಚನ್ನಬಸವರಾಜ ಜುಗತಿ, ಸೋನಿಕಾ ಎ.ಎಸ್., ರೇಣುಕಾ, ಈಶ್ವರ ಹೊಳೆಪ್ಪನವರ, ಚಿದಾನಂದ ವನ್ನೂರಿ, ಲಕ್ಷ್ಮೀ ಕೆಸರಗೊಪ್ಪ, ಅನುಷ್ಕಾ ಸಿ.ಎ. ಇತರರಿದ್ದರು.
ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು
ಅರಬಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಜರುಗಿತು. ಲೋಕಾಯುಕ್ತ ಎಸ್ಪಿ ಹನುಮಂತರಾಯ, ಡಾ.ಸಿ.ಕೆ.ನಾವಲಗಿ ಇತರರಿದ್ದರು.