ವಿಜಯವಾಣಿ ಸುದ್ದಿಜಾಲ ಕೋಲಾರ
ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಪರೀಕ್ಷಾ ಪಾವಿತ್ರö್ಯತೆಗೆ ಧಕ್ಕೆಯಾಗದ ರೀತಿ ಕರ್ತವ್ಯ ನಿರ್ವಹಿಸಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಮುಖ್ಯಅಧೀಕ್ಷಕ ವೇಣುಗೋಪಾಲ್ ತಿಳಿಸಿದರು.
ನಗರದ ಅಲಮಿನ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಮಾ.೨೧ ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ಹಾಗೂ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿ ಆತಂಕ, ಭಯ ಮೂಡಿಸುವ ಕೆಲಸ ಬೇಡ, ಆತ್ಮಸೈರ್ಯ ತುಂಬುವ ಕೆಲಸ ಮಾಡೋಣ ಮೊದಲ ದಿನ ಆತಂಕದಿAದ ಬರುವ ಮಕ್ಕಳಿಗೆ ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದರ ಮಾಹಿತಿಯನ್ನು ಒದಗಿಸಿ ಅವರನ್ನು ನಗುತ್ತಾ ಸ್ವಾಗತಿಸುವ ಕೆಲಸ ಮಾಡೋಣ ಎಂದರು.
ಕೊಠಡಿ ಮೇಲ್ವಿಚಾರಕರು ಸಮಯಪಾಲನೆ ಮಾಡಿ, ಪರೀಕ್ಷಾ ಕಾರ್ಯಕ್ಕೆ ನಿಗಧಿಯಾದ ಸಮಯಕ್ಕೆ ನೀವು ಹಾಜರಾಗಬೇಕು, ಪಕ್ಕದ ಕೊಠಡಿಗಳ ಶಿಕ್ಷಕರೊಂದಿಗೆ ಮಾತನಾಡುವುದು, ಮಕ್ಕಳು ಪರೀಕ್ಷೆ ಬರೆಯಲು ನಾವೇ ಅಡಚಣೆಯುಂಟು ಮಾಡುವುದು ಬೇಡ, ಇಲಾಖೆ ನಿಯಮಗಳಂತೆ ಕೇಂದ್ರಕ್ಕೆ ಎಲೆಕ್ಟಾçನಿಕ್ ವಾಚ್, ಸಲಕರಣೆ ತರಲು ಅವಕಾಶವಿಲ್ಲ, ಅದರ ಪರಿಶೀಲನೆ ನಡೆಸಿ ಎಂದರು.
ನಕಲು ಮಾಡಲು ಅವಕಾಶ ನೀಡದಿರಿ, ಮಕ್ಕಳಿಗೆ ಉತ್ತರ ಪತ್ರಿಕೆ ನೀಡಿದ ತಕ್ಷಣ ಅದನ್ನು ಹೇಗೆ ತುಂಬುವುದು ಎಂಬುದರ ಮಾಹಿತಿ ನೀಡಿ, ಉತ್ತರ ಪತ್ರಿಕೆ ನೀಡುವಾಗ ಮತ್ತು ವಾಪಸ್ಸು ಪಡೆಯುವಾಗ ಸಹಿ ಪಡೆಯಿರಿ, ಅವರ ಪ್ರವೇಶಪತ್ರ ಮತ್ತು ನಿಮಗೆ ನೀಡಿರುವ ಎಎಂಎಲ್ ಪರಿಶೀಲಿಸಿ ದೃಢಪಡಿಸಿಕೊಳ್ಳಿ ಎಂದರು.
ಕಸ್ಟೋಡಿಯನ್ ಸಿದ್ದೇಶ್ವರಿ ಮಾತನಾಡಿ, ಸುಗಮ ಪರೀಕ್ಷೆಗೆ ಹಲವು ಸಲಹೆ ನೀಡಿ, ಗೊಂದಲವಿಲ್ಲದೇ ಪರೀಕ್ಷೆ ನಡೆಸೋಣ, ಕೊಠಡಿ ಮೇಲ್ವಿಚಾರಕದ್ದು ಹೆಚ್ಚಿನ ಜವಾಬ್ದಾರಿ ಇದೆ, ಮಕ್ಕಳಿಗೆ ನೀಡುವ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಮತ್ತಿತರ ಮಾಹಿತಿ ತುಂಬಲು ಮಾರ್ಗದರ್ಶನ ನೀಡಿ ಎಂದರು.
ಮೊಬೈಲ್ ಸ್ವಾಧೀನಾಧಿಕಾರಿ ವೆಂಕಟರಮಣಪ್ಪ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಕೆ.ಬಿ.ಶಿವಶಂಕರರೆಡ್ಡಿ, ಎಂ.ರಮೇಶ್, ಅಬ್ದುಲ್ ವಾಜೀದ್, ಶಾಜಿಯಾ ಬೇಗಂ, ತಯಿಯಾಖಾನಂ, ಎಂ.ಎಸ್.ಕುಪ್ಪಯ್ಯ, ಎಂ.ಪ್ರಶಾAತ್, ಚಾಂದ್ ಪಾಷಾ, ಮಂಜುಳಮ್ಮ, ವಿ.ಭಾಗ್ಯಲಕ್ಷಿö್ಮ, ಸುನಂದಮ್ಮ, ಚಂದ್ರಮೌಳಿ, ಬಿ.ವಿ.ನಂಜುAಡಪ್ಪ, ಶ್ರೀನಿವಾಸಲು, ಆರ್.ರಾಧಾ, ರೇಣುಕಾಲಕ್ಷಿö್ಮ, ಶಾರದಾ ಮತ್ತಿತರರಿದ್ದರು.
ಚಿತ್ರ ೨೦ ಕೆ.ಎಲ್.ಆರ್. ೦೨ : ಕೋಲಾರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾದ ಅಲಮಿನ್ ಪ್ರೌಢಶಾಲೆಯಲ್ಲಿ ಮಾ.೨೦ ರಂದು ಪರೀಕ್ಷೆಗೆ ಪೂರ್ವಭಾವಿಯಾಗಿ ಮುಖ್ಯ ಅಧೀಕ್ಷಕ ವೇಣುಗೋಪಾಲ್ ಕೊಠಡಿ ಮೇಲ್ವಿಚಾರಕರ ಸಭೆ ನಡೆಸಿದರು.