ಅರ್ಧಶಕ್ತಿಗೆ ವ್ಯಾಯಾಮ ನಿಲ್ಲಿಸಿ!

  • ಡಾ. ಗಿರಿಧರ ಕಜೆ

ಳಿಗೆ ಬೇಗಎದ್ದು ವ್ಯಾಯಾಮ ಮಾಡಿದರೆ ಶೀತ ಆರಂಭವಾದರೆ ಕಷ್ಟ ಎಂಬ ನೆಪವೊಡ್ಡುವವರಿದ್ದಾರೆ. ಮಳೆಗಾಲದಲ್ಲಿ ಆಗಾಗ ಮಳೆ ಬರುವುದರಿಂದ ಒಂದುದಿನ ವ್ಯಾಯಾಮ ಮಾಡಿದರೆ ಇನ್ನೆರಡುದಿನ ಮಳೆಯಿಂದಾಗಿ ನಿಲ್ಲಿಸಬೇಕಾಗುತ್ತದೆ ಎಂದು ಅವರೇ ಗೊಣಗುತ್ತಾರೆ. ಬೇಸಿಗೆಯಲ್ಲಿ ವಿದ್ಯುತ್ ಅಭಾವದಿಂದ ಫ್ಯಾನಿಲ್ಲದೆ ರಾತ್ರಿ ನಿದ್ದೆ ಸರಿಯಾಗಿ ಬಂದಿಲ್ಲ, ಬೇಗ ಏಳುವುದಾದರೂ ಹೇಗೆ ಎಂಬ ಪಿಳ್ಳೆನೆವ ಮುಂದೊಡ್ಡುತ್ತಾರೆ. ವಿಚಿತ್ರವೆಂದರೆ ಸ್ವಾಸ್ಥ್ಯದ ಬಗ್ಗೆ ನಿಜ ಕಾಳಜಿಯಿರುವವರು. ಎಲ್ಲಾ ಕಾಲದಲ್ಲೂ ವ್ಯಾಯಾಮ ಮಾಡುತ್ತಲೇ ಇರುತ್ತಾರೆ! ಈ ವ್ಯಾಯಾಮ ಮಾಡಲು ಹಣ ಖರ್ಚು ಆಗುವುದಿಲ್ಲ. ಬೇಕಾದ್ದು ಸಮಯ ಮತ್ತು ದೃಢಮನಸ್ಸು ಮಾತ್ರ. ಪೌಷ್ಟಿಕ ಆಹಾರ ಸೇವಿಸುವ ಬಲಶಾಲಿಗಳು ಶೀತಕಾಲ ಹಾಗೂ ವಸಂತಋತುಗಳಲ್ಲಿ ಯಥಾನುಶಕ್ತಿ ವ್ಯಾಯಾಮ ಮಾಡಬಹುದು. ಉಳಿದ ಋತುಗಳಲ್ಲಿ ಹಾಗೂ ಉಳಿದವರು ಅರ್ಧಬಲ ವ್ಯಯವಾದಾಗ ನಿಲ್ಲಿಸಲೇಬೇಕು.

ಇಂದಿನ ಜಿಮ್​ವ್ಯಾಯಾಮ ಗರಡಿಗಳಲ್ಲಿ ದೇಹವನ್ನು ಮಿತಿಮೀರಿ ದಂಡಿಸುವುದನ್ನು ಕಾಣುತ್ತಿದ್ದೇವೆ. ಎದೆಯನ್ನು ಹಿಗ್ಗಿಸಿ, ಹೊಟ್ಟೆ, ಸೊಂಟಗಳನ್ನು ವಿಪರೀತವಾಗಿ ಕುಗ್ಗಿಸಿದರೆ ಆರೋಗ್ಯ ಬರುವುದಾದರೂ ಹೇಗೆ? ಇದರಿಂದ ಶ್ವಾಸಕೋಶ ಹಾಗೂ ಜೀರ್ಣಾಂಗದ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವುಂಟಾಗಿ ದೀರ್ಘಕಾಲದಲ್ಲಿ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದಲೇ ಬಾಕ್ಸರ್​ಗಳು, ಬಾಡಿಬಿಲ್ಡರ್​ಗಳು, ವೆಯ್್ಟಫ್ಟರ್​ಗಳ ಜೀವಿತಾವಧಿಯು ಏನೂ ವ್ಯಾಯಾಮ ಮಾಡದ ಜನರಿಗಿಂತಲೂ ಕಡಿಮೆಯಿರುತ್ತದೆ!

ಅರ್ಧಶಕ್ತಿ ಮುಗಿದಾಕ್ಷಣ ವ್ಯಾಯಾಮ ನಿಲ್ಲಿಸಿ ಎಂದು ಆಯುರ್ವೆದ ಆಜ್ಞಾಪಿಸಿದ್ದು ಅದಕ್ಕಾಗಿಯೇ. ಅರ್ಧಬಲ ಕಡಿಮೆಯಾದದ್ದನ್ನು ಹೇಗೆ ತಿಳಿಯುವುದೆಂಬ ಕುತೂಹಲ ಎಲ್ಲರಲ್ಲಿರುತ್ತದೆ. ಪಿತ್ತಪ್ರಕೃತಿಯವರಿಗೆ ಜೋರಾದ ಏದುಸಿರಿನಿಂದ ಬಾಯಿಯು ಒಣಗಿದರೆ ಹಾಗೂ ವಾತ, ಕಫ ಶರೀರಪ್ರಕೃತಿಯವರಿಗೆ ಹಣೆ, ಮೂಗು, ಸಂಧಿಗಳು, ಕಂಕುಳಿನಲ್ಲಿ ಬೆವರಿದರೆ ಅದು ಬಲಾರ್ಧ ಮುಗಿದ ಲಕ್ಷಣ. ಇದುಬಿಟ್ಟು ಅತಿಯಾಗಿ ಮಾಡುವ ವ್ಯಾಯಾಮದಿಂದ ಆರೋಗ್ಯದ ಪತನ ನಿಶ್ಚಿತ. ಬೃಹತ್ ಗಾತ್ರದ ಆನೆಯನ್ನು ಸಿಂಹವು ಎಳೆದಾಡಿದರೆ ಹೇಗೆ ವನರಾಜನ ಅಂತ್ಯ ನಿಶ್ಚಿತವೋ ಅದೇರೀತಿ ಅತಿಯಾದ ಶರೀರಾಯಾಸದಿಂದ ಪ್ರಾಣಕ್ಕೇ ಸಂಚಕಾರ ಬರಬಹುದು ಎಂಬ ಉದಾಹರಣೆಯೊಂದಿಗೆ ಆದಿವೈದ್ಯ ಗ್ರಂಥಗಳು ನಮ್ಮನ್ನು ಎಚ್ಚರಿಸಿವೆ.

ಪಂಚಸೂತ್ರಗಳು

  • ಪಾರಿಜಾತ: ಚರ್ಮರೋಗಗಳಲ್ಲಿ ಅನುಕೂಲಕರ.
  • ಅನಾನಸು: ಮೂತ್ರಕಲ್ಲು ನಿವಾರಣೆ.
  • ಪಡುವಲಕಾಯಿ: ತಲೆನೋವು ಗುಣಕಾರಿ.
  • ಸಾಸಿವೆ: ಆನೆಕಾಲು ರೋಗಿಗಳಿಗೆ ಹಿತ.
  • ಬಾರ್ಲಿ: ತೊಡೆನೋವು ನಿವಾರಕ.

ಕೊನೆ ಹನಿ

ಕಾಲುಚಮಚ ವಾಯುವಿಡಂಗ ಚೂರ್ಣವನ್ನು ಹಲ್ಲಿನಮಧ್ಯೆ ಇಟ್ಟುಕೊಂಡರೆ ನೋವು ಶಮನ.

 

Leave a Reply

Your email address will not be published. Required fields are marked *