More

  ಅರ್ಚಕರ ವಿರುದ್ಧ ಕ್ರಮವಹಿಸಿ

  ಚಿತ್ರದುರ್ಗ: ವೈಕುಂಠ ಏಕಾದಶಿಯಂದು ಬಾಗೂರು ಗ್ರಾಮದ ಚನ್ನಕೇಶವ ಸ್ವಾಮಿ ದರ್ಶನಕ್ಕಾಗಿ ಒಳಗೆ ಪ್ರವೇಶಿಸಿದ್ದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ತಡೆಯೊಡ್ಡಿ ಅವಮಾನಿಸಿರುವ ದೇಗುಲದ ಅರ್ಚಕರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

  ಸ್ವಾಮೀಜಿ ಹೊರಬಂದ ನಂತರ ದೇಗುಲವನ್ನು ನೀರಿನಿಂದ ತೊಳೆದಿರುವ ಕುರಿತು ಅವರೇ ನೊಂದು ಹೇಳಿಕೆ ನೀಡಿದ್ದಾರೆ. ಅಸ್ಪಶ್ಯತೆ ಇನ್ನೂ ಜಿಲ್ಲೆಯಲ್ಲಿ ಜೀವಂತವಾಗಿದೆ. ಸಮುದಾಯಕ್ಕೂ ಅವಮಾನಿಸಿದಂತೆ ಎಂದು ಬೇಸರಿಸಿದರು.

  ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಕೂಡಲೇ ದೇಗುಲದ ಗರ್ಭಗುಡಿ ತೆರವುಗೊಳಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇಡಬೇಕು. ಅಲ್ಲಿ ಅಂಗನವಾಡಿ ಅಥವಾ ಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.

  ಪದಾಧಿಕಾರಿಗಳಾದ ಗೋಪಿನಾಥ್, ರಾಜಣ್ಣ, ಅಖಿಲೇಶ್, ಪ್ರದೀಪ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts