More

  ಅರುಣೋದಯ ಪ್ರೌಢಶಾಲೆಗೆ ನಾಲ್ಕು ಅಗ್ರಶ್ರೇಣಿ

  ಬೀದರ್: ನಗರದ ಅರುಣೋದಯ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆಗೈದಿದ್ದಾರೆ.
  ಪ್ರಜ್ವಲ್ ಸುಭಾಷ್ ಪಾಟೀಲ ಶೇ 89.44, ಭವಾನಿ ಗಣಪತಿ ಶೇ 88.64, ಶ್ರೇಯಾ ಪ್ರಕಾಶ ರೆಡ್ಡಿ ಶೇ 86.88, ನವೀನ್ ದೇವೇಂದ್ರ ಶೇ 86.56 ರಷ್ಟು ಅಂಕ ಗಳಿಸಿದ್ದಾರೆ.
  ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ದೊರೆತಿದೆ. 4 ಅಗ್ರಶ್ರೇಣಿ, 11 ಪ್ರಥಮ ದರ್ಜೆ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
  ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದೆ ಎಂದು ಋಷಿಕೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲ್ ಪಾಟೀಲ ಗಾದಗಿ, ಉಪಾಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಕಾರ್ಯದರ್ಶಿ ರಾಜೇಂದ್ರ ಮಣಗೇರೆ, ಜಂಟಿ ಕಾರ್ಯದರ್ಶಿ ಅನಿಲ್ ಕಾಜಿ, ಆಡಳಿತ ಮಂಡಳಿ ಸದಸ್ಯರಾದ ಸುನೀಲ್ ಗೌಳಿ, ಮಲ್ಲಿಕಾರ್ಜುನ ಹರಡಗಿ, ನಾಮದೇವ ನಿಟ್ಟೂರೆ, ಸಂತೋಷ ಮಂಗಳೂರೆ, ಅನುಸೂಯಾ ಕಾಳೆ ಹಾಗೂ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts