ಅರುಣಿ ಸೌಂದರ್ಯ ಸ್ಪರ್ಧೆ ವಿಜೇತೆ

ಬೆಂಗಳೂರು: ಕಮಲಾನಗರದ ಕೆಎಇ ಇಂಜಿನಿಯರ್ಸ್ ಅಕಾಡೆಮಿಯ ಪ್ರಭಾತ್ ರಂಗ ಮಂದಿರದಲ್ಲಿ ಇತ್ತೀಚೆಗೆ ಆಯೋ ಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಜಾಲಹಳ್ಳಿ ಬಾಹುಬಲಿ ನಗರದ ಅರುಣಿ ಎ. ವಿಜೇತರಾಗಿ ಹೊರಹೊಮ್ಮಿ ದ್ದಾರೆ. ಕಲಾ ನವೀನ್ ಫಿಲ್ಮ್ ಇನ್​ಸ್ಟಿಟ್ಯೂಟ್ ಟ್ರಸ್ಟ್ ಏರ್ಪಡಿಸಿದ್ದ 20ರಿಂದ 35ರೊಳಗಿನ ವಯೋಮಿತಿಯ ಕಿಂಗ್ ಆಂಡ್ ಕ್ವೀನ್ ಕರ್ನಾಟಕ, ಮಿಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ನಗರದ ವಿವಿಧ ಭಾಗಗಳಿಂದ 12 ಸ್ಪರ್ಧಿಗಳು ಭಾಗವಹಿಸಿದ್ದರು. ಮೂರು ಹಂತಗಳ ಪೈಪೋಟಿಯಲ್ಲಿ ಅರುಣಿ ಪ್ರಥಮ ಸ್ಥಾನದೊಂದಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬಾಲ್ಯದಿಂದಲೂ ಗ್ರಾಮೀಣ ಬದುಕಿನ ಆದರ್ಶಗಳನ್ನು ಮೈಗೂ ಡಿಸಿಕೊಂಡಿರುವ ಅರುಣಿ ಭರತನಾಟ್ಯ ಕಲಿತಿದ್ದು, ಶಾಸ್ತ್ರಿಯ ಸಂಗೀತ, ವೀಣೆ, ಪಾಶ್ಚಾತ್ಯ ನೃತ್ಯದಲ್ಲೂ ಪರಿಣಿತರಾಗಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಇವರು ಸೆಲೆಬ್ರಿಟಿಗಳಿಗೆ ಮೆಕಪ್ ಆರ್ಟಿಸ್ಟ್ ಆಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಈಗಾಗಲೇ ಮಿಸ್ ನೀಲ್​ಗಿರೀಸ್- 2018 ಬ್ಯೂಟಿಫುಲ್ ಸ್ಮೈಲ್ ಕ್ವಿನ್ಸ್ ಆಫ್ ಹಿಲ್, ಬೆಸ್ಟ್ ಎಥ್ನಿಕ್ ವೇರ್ ಕ್ವೀನ್ಸ್ ಆಫ್ ಹಿಲ್ ಊಟಿ, ಮಿಸ್ ಕರ್ನಾಟಕ 2018-19 ಸೇರಿ ಹತ್ತುಹಲವು ಪ್ರಶಸ್ತಿಗಳು ಅರುಣಿ ಅವರಿಗೆ ಸಂದಿವೆ.

ಹೆಣ್ಣು ಅಬಲೆ ಅಲ್ಲ. ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಳ್ಳಬೇಕು. ಗುರಿ ಮತ್ತು ಸಾಧನೆಯನ್ನು ಧ್ಯೇಯವಾಗಿಟ್ಟುಕೊಂಡ ಮದರ್ ತೆರೆಸಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮರಂಥ ನೂರಾರು ಮಹಿಳೆಯರು ಸಮಾಜದ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಇತಿಹಾಸದ ಪುಟದಲ್ಲಿ ಅಜರಾಮರರಾಗಿದ್ದಾರೆ. ಅವರಿಂದ

ಸ್ಪೂರ್ತಿ ಪಡೆದು ತಂತಮ್ಮ ಕ್ಷೇತ್ರಗಳಲ್ಲಿ ಶ್ರಮಿಸಿದರೆ ಖಂಡಿತ ಪ್ರತಿಫಲ ಸಿಗುತ್ತದೆ.

| ಅರುಣಿ ಎ. ಸೌಂದರ್ಯ ಸ್ಪರ್ಧೆ ವಿಜೇತೆ

Leave a Reply

Your email address will not be published. Required fields are marked *