More

  ಅರಬಾವಿ ಕ್ಷೇತ್ರದಲ್ಲಿ 12 ಕಾಳಜಿ ಕೇಂದ್ರ – ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ: ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರದ ಜನರ ಅನುಕೂಲಕ್ಕಾಗಿ 12 ಕಾಳಜಿ ಕೇಂದ್ರ ತೆರೆದಿದ್ದು, ಎನ್‌ಎಸ್‌ಎಫ್ ತಂಡ ತ್ವರಿತಗತಿಯಲ್ಲಿ ನಿರಾಶ್ರಿತರಿಗೆ ನೆರವಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

  ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ನೆರೆ ಹಾವಳಿಯಿಂದ ಆಗಬಹುದಾದ ಅವಘಡ ತಪ್ಪಿಸಲು ಶಕ್ತಿಮೀರಿ ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ. ಘಟಪ್ರಭಾ ನದಿಗೆ 1,36,591 ಕ್ಯೂಸೆಕ್ ನೀರು ಬರುತ್ತಿದೆ.

  ಹಿಡಕಲ್ ಜಲಾಶಯಕ್ಕೆ 97 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಘಟಪ್ರಭಾ ನದಿಗೆ 50 ಸಾವಿರ ಕ್ಯೂಸೆಕ್ ಹರಿಸಲಾಗುತ್ತಿದೆ. ಹಿರಣ್ಯಕೇಶಿ ನದಿಯಿಂದ 55,591 ಕ್ಯೂಸೆಕ್, ಮಾರ್ಕಂಡೇಯ ನದಿಯಿಂದ 15 ಸಾವಿರ ಕ್ಯೂ., ಬಳ್ಳಾರಿ ನಾಲಾದಿಂದ 16 ಸಾವಿರ ಕ್ಯೂ. ನೀರು ಘಟಪ್ರಭಾ ನದಿಗೆ ಬರುತ್ತಿದ್ದು ಒಟ್ಟು 1,36,591 ಕ್ಯೂಸೆಕ್ ನೀರು ನದಿ ಸೇರುತ್ತಿದೆ ಎಂದು ತಿಳಿಸಿದ್ದಾರೆ.

  2019ರಲ್ಲಿ ಸುರಿದ ಭಾರಿ ಮಳೆಯಿಂದ ಘಟಪ್ರಭಾ ನದಿಗೆ 2.40 ಲಕ್ಷ ಕ್ಯೂಸೆಕ್ ನೀರು ಬಂದಿತ್ತು. ಈ ಬಾರಿಯೂ ಅದೇ ಆತಂಕ ಆವರಿಸಿತ್ತಾದರೂ ಶನಿವಾರ ವರುಣನ ಅಬ್ಬರ ಕಡಿಮೆಯಾಗಿದೆ. ಜಲಾವೃತಗೊಂಡ ಗ್ರಾಮಗಳಲ್ಲಿ ಜನರ ಸುರಕ್ಷತೆಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಸ್ಥಳಗಳಲ್ಲಿ ಬೋಟ್‌ಗಳ ವ್ಯವಸ್ಥೆ ಮಾಡಲಾಗಿದೆ.

  ನದಿ ತೀರದ ಅಡಿಬಟ್ಟಿ, ಚಿಗದೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಮಸಗುಪ್ಪಿ, ಹುಣಶ್ಯಾಳ ಪಿಜಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಉಳಿದ ಗ್ರಾಮಗಳು ಭಾಗಶಃ ನೀರಿನಿಂದ ಆವೃತವಾಗಿವೆ ಎಂದು ಹೇಳಿದ್ದಾರೆ.

  Array

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts