ಶಿಕಾರಿಪುರ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದ್ದು ಇತರ ಪಾರಂಪರಿಕ ಅರಣ್ಯ ಸಾಗುವಳಿದಾರರಿಗೆ 75 ವರ್ಷದ ಬದಲಾಗಿ 25 ವರ್ಷದ ಒಂದು ತಲೆಮಾರಿನ ದಾಖಲೆ ನೀಡಲು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಎಸಿ ಮತ್ತು ಡಿಸಿ, ಗ್ರಾಮ ಅರಣ್ಯ ಸಮಿತಿಯಲ್ಲಿ ದಾಖಲೆಗಳೊಂದಿಗೆ ಕಡತಗಳು ಇದ್ದು ಇವುಗಳನ್ನು ಜಿಲ್ಲಾಧಿಕಾರಿಗಳು ಮರು ಪರಿಶೀಲಿಸಿ ಮಂಜೂರಾತಿ ನೀಡಬೇಕು. ತಾಲೂಕಿನಲ್ಲಿ ಈಗಾಗಲೇ ಮೂಲ ದರಖಾಸ್ತು ಮತ್ತು ಬಗರ್‌ಹುಕುಂ ಅಡಿಯಲ್ಲಿ ಮಂಜೂರಾಗಿರುವ 8,260 ಎಕರೆ ಪಹಣಿ ಮತ್ತು ಖಾತೆ ಇರುವ ಜಮೀನನ್ನು ಅರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆಯವರು ತಾಲೂಕು ಕಚೇರಿಗೆ ಶಿಫಾರಸು ಮಾಡಿದ್ದು ಆರಣ್ಯಕ್ಕೆ ಸೇರಿಸುವುದನ್ನು ಸ್ಥಗಿತಗೊಳಿಸಿ ಎಂದು ಆಗ್ರಹಿಸಿದರು.
1978ರ ಪೂರ್ವದಲ್ಲಿ 1,000ಕ್ಕೂ ಹೆಚ್ಚು ಅರಣ್ಯ ಸಾಗುವಳಿದಾರರಿಗೆ 1986ರಲ್ಲಿ ಆಳತೆಯಾಗಿ ಡಿಸಿ ಆದೇಶವಾಗಿ ಖಾತೆ ಆಗಲು ಅರಣ್ಯ ಮತ್ತು ತಾಲೂಕು ಕಚೇರಿಯಲ್ಲಿ ಕಡತಗಳು ಬಾಕಿ ಇದ್ದು ಕೂಡಲೆ ಅಂತಹವರಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡಿಕೊಡಬೇಕು. ಬೇಗೂರು, ಬೆಂಡೆಕಟ್ಟೆ, ತಡಸನಹಳ್ಳಿ, ತಡಗುಣಿ, ಇನಾಂ ಅಗ್ರಹಾರ ಮುಚುಡಿ ಗ್ರಾಮಗಳಲ್ಲಿ ರೈತರು ಇನಾಂ ಜಮೀನು ಸಾಗುವಳಿ ಮಾಡುತ್ತಿದ್ದು ಕೂಡಲೆ ಇವರಿಗೆ ಜಮೀನು ಮಂಜೂರು ಮಾಡಲು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಮಾತನಾಡಿ, ರಾಜ್ಯಕ್ಕೆ ವಿದ್ಯುತ್ ಕೊಟ್ಟ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆಯಿಂದ ಕಂದಾಯ ಜಮೀನು ವಾಪಸು ಪಡೆದು ಹಕ್ಕುಪತ್ರ ನೀಡಬೇಕು. ಈ ಹಿಂದೆ ಸರ್ಕಾರಿ ಜಮೀನುಗಳಾದ ಗೋಮಾಳ, ಮುಫತ್ತು, ಸರ್ಕಾರಿ ಫಡಾ ಜಮೀನುಗಳನ್ನು ಸ್ಟೇಟ್ ಫಾರೆಸ್ಟ್, ಕಿರು ಅರಣ್ಯ, ಗಂಗವ್ವನಸರ, ಚಂದ್ರಕಲಾ ಫಾರೆಸ್ಟ್, ಮೀಸಲು ಅರಣ್ಯ ಎಂದು ಅರಣ್ಯಕ್ಕೆ ಸೇರಿದ್ದು ಇವುಗಳನ್ನು ಕೂಡಲೆ ಕಂದಾಯ ಇಲಾಖೆಗೆ ವಾಪಸು ಪಡೆದು ಬಗರ್‌ಹುಕುಂ ಕಾಯ್ದೆಯಡಿಯಲ್ಲಿ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ: ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ
ನಿಮ್ಮ ಅಂಗೈನಲ್ಲಿ X ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನೀವು ಬೆರಗಾಗೋದು ಖಚಿತ!
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ನೀವು ಆರೋಗ್ಯವಾಗಿದ್ದೀರಾ? ನಿಮ್ಮ ದೇಹವು ನೀಡುವ ಈ ಸಂಕೇತಗಳಿಂದ ಸುಲಭವಾಗಿ ತಿಳಿಯಬಹುದು…
ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಹಾಗೂ ಹರಡುತ್ತಿರುವ ಹಲವಾರು ರೋಗಗಳ ನಡುವೆ ಆರೋಗ್ಯವಾಗಿರುವುದೇ ಒಂದು ಸೌಭಾಗ್ಯ ಎಂದರೆ…
ಮೊಬೈಲ್ ಬಳಸಿದ್ರೆ ಬರುತ್ತೆ ಬ್ರೇನ್ ಕ್ಯಾನ್ಸರ್! ಸಂಶೋಧನೆಯಲ್ಲಿ ಭಯಲಾಯ್ತು ಭಯಾನಕ ಸತ್ಯ
ನವದೆಹಲಿ: ಪ್ರತಿಯೊಬ್ಬರ ಕೈಯಲ್ಲಿ ಫೋನ್ . ಈಗ ಮನೆಯಲ್ಲಿ ಎಷ್ಟೇ ಜನ ಇದ್ದರೂ ಎಲ್ಲರ ಕೈಯಲ್ಲೂ…