ಸಕಲೇಶಪುರದ ಬ್ಯಾಕರವಳ್ಳಿಯಲ್ಲಿ ಕಾಡಾನೆ ದಾಳಿ: ಅರಣ್ಯ ಸಿಬ್ಬಂದಿ ಬೈಕ್​ಗೆ ಜಖಂ

ಹಾಸನ: ಸಕಲೇಶಪುರ ತಾಲೂಕು ಬ್ಯಾಕರವಳ್ಳಿಯಲ್ಲಿ ಅರಣ್ಯ ಸಿಬ್ಬಂದಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರಣ್ಯ ಸಿಬ್ಬಂದಿ ಲೋಕೇಶ್ ಅವರ ಮೇಲೆ ನುಗ್ಗಿ ಬಂದ ಕಾಡಾನೆಯ ಕಾಲಿನಡಿ ಸಿಲುಕಿ ಅವರ ಬೈಕ್ ಜಖಂಗೊಂಡಿದೆ. ಕಾಡಾನೆ ದಾಳಿ ಮಾಡುವುದನ್ನು ಮುಂಗಂಡಿದ್ದ ಲೋಕೇಶ್​ ಸಕಾಲದಲ್ಲಿ ಬೈಕ್​ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿ ಉಳಿಸಿಕೊಂಡಿದ್ದಾರೆ. .

ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ವೇಳೆ ಸಿಟ್ಟಿಗೆದ್ದ ಆನೆ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದಿತು ಎನ್ನಲಾಗಿದೆ.