ಅರಣ್ಯ, ನೀರು ಸಂರಕ್ಷಣೆ ಎಲ್ಲರ ಹೊಣೆ

blank

ಬೆಳಗಾವಿ: ಜಗತ್ತಿನ ಜೀವಸಂಕುಲದ ರಕ್ಷಣೆಗೆ ಅರಣ್ಯ ಮತ್ತು ಜಲ ಅತ್ಯವಶ್ಯ. ಅರಣ್ಯ ಮತ್ತು ನೀರು ಒಂದಕ್ಕೊಂದು ಪೂರಕವಾಗಿವೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಿವೃತ್ತ ಮುಖ್ಯ ಅರಣ್ಯಾಧಿಕಾರಿ ಬಸವರಾಜ ಪಾಟೀಲ ಹೇಳಿದರು.

ನಗರದ ಸ್ನೇಹ ಸಮಾಜ ಸೇವಾ ಸಂಘ ಮತ್ತು ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆಯಿಂದ ಬುಧವಾರ ರಾಮತೀರ್ಥನಗರದಲ್ಲಿ ವಿಶ್ವ ಅರಣ್ಯ ಮತ್ತು ಜಲ ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟಿಸಿ ಮಾತನಾಡಿದರು. ಜಲ ಮತ್ತು ಅರಣ್ಯದ ಬಗ್ಗೆ ನಿರ್ಲಕ್ಷೃ ವಹಿಸುತ್ತಿರುವುದು ಸರಿಯಲ್ಲ. ಆರೋಗ್ಯಕರ ಜಗತ್ತು ನಮ್ಮ ಮುಂದಿನ ಪೀಳಿಗೆಯ ಅತಿ ದೊಡ್ಡ ಆಸ್ತಿ. ಅದನ್ನು ಸುರಕ್ಷಿತವಾಗಿ ಕೊಡುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.

ಕಾಡು ನಾಶಪಡಿಸಿ ಅತಿಕ್ರಮಣ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡು ಪ್ರವೇಶಿಸುತ್ತಿವೆ. ಬದಲಾಗುತ್ತಿರುವ ಮಾನವನ ಜೀವನಶೈಲಿ ಜೀವಸಂಕುಲದ ಮೇಲೆ
ದುಷ್ಪರಿಣಾಮ ಬೀರುತ್ತಿದೆ. ನಿಸರ್ಗಕ್ಕೆ ಪೂರಕವಾದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ವಾತಾವರಣ ಆರೋಗ್ಯಕರವಾಗಿರಲು ಸಾಧ್ಯ ಎಂದರು.

ಸಿದ್ಧ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಮಹಿಳಾ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಡಾ.ಎ.ಎಲ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸ್ನೇಹ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಎ.ಎಲ್.ಪಾಟೀಲ, ನಗರ ಸೇವಕ ಹನುಮಂತ ಕೊಂಗಾಲಿ, ಎನ್.ಬಿ.ನಿರ್ವಾಣಿ, ಡಿ.ಎನ್.ಮಿಸಾಳೆ, ಜಗದೀಶ ಮಠದ, ಎಸ್.ಜಿ.ಕಾಮತ, ವಿಲಾಸ ಕೇರೂರ, ಡಿ.ಎಂ.ಟೊಣ್ಣೆ, ಡಿ.ಬಿ.ಉಳ್ಳೇಗಡ್ಡಿ, ಬಸವರಾಜ ಗೌಡಪ್ಪಗೋಳ, ಜಿ.ಎಸ್.ಹಿರೇಮಠ, ಮಹೇಶ ಚಿಟಗಿ, ಮಲ್ಹಾರ ದೀಕ್ಷಿತ, ಸಿ.ಎಸ್.ಖನಗಣ್ಣಿ, ಬಿ.ಎಂ.ಮೋದಗಿ, ಪ್ರೊ.ಎ.ಕೆ.ಪಾಟೀಲ, ಎನ್.ಬಿ.ಹನ್ನಿಕೇರಿ, ಕಲ್ಲಪ್ಪ ಮಜಲಟ್ಟಿ, ಐ.ಬಿ.ನಿರ್ವಾಣಿ, ಎಸ್.ಎಂ.
ಮೇಲಿನಮನಿ, ಅನಂತ ಹನ್ನಿಕೇರಿ ಇತರರಿದ್ದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು. ಜಿ.ಐ.ದಳವಾಯಿ ಪ್ರಾರ್ಥಿಸಿದರು. ಆರ್.ಜಿ.ಮೆಳವಂಕಿ ವಂದಿಸಿದರು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…