ಅಯ್ಯೋ ವಿದ್ಯಾಪತಿ ವಿಧಿಯೇ…: ನಟ ಜಗ್ಗೇಶ್ ಧ್ವನಿಯಲ್ಲಿ ಮೂಡಿಬಂದ ಚಿತ್ರದ ಮೊದಲ ಸಾಂಗ್

blank

ಬೆಂಗಳೂರು: ನಟನೆಯ ಜತೆ ಜತೆಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ನಟರ ಪೈಕಿ ಡಾಲಿ ಧನಂಜಯ್ ಕೂಡ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಹಿಂದೆ ‘ಬಡವ ರಾಸ್ಕಲ್’, ‘ಹೆಡ್‌ಬುಷ್’, ‘ಟಗರು ಪಲ್ಯ’ ಚಿತ್ರಗಳನ್ನು ಡಾಲಿ ನಿರ್ಮಿಸಿದ್ದರು. ಇದೀಗ ಅವರು ನಿರ್ಮಿಸುತ್ತಿರುವ ನಾಲ್ಕನೇ ಚಿತ್ರ ‘ವಿದ್ಯಾಪತಿ’. ಇಶಾಂ ಮತ್ತು ಹಸೀಂ ಖಾನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಹಾಸ್ಯ ಪ್ರಧಾನ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿದ್ದು, ‘ಉಪಾಧ್ಯಕ್ಷ’ ಖ್ಯಾತಿಯ ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ. ರಂಗಾಯಣ ರಘು ಸೇರಿ ಹಲವರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ಕಾಮಿಡಿ ಕಿಕ್ ನೀಡಿರುವ ಈ ‘ವಿದ್ಯಾಪತಿ’ ಈಗ ಹಾಡಿನಲ್ಲೂ ಹಾಸ್ಯದ ಹೊನಲು ಹರಿಸಿದ್ದಾನೆ. ಇತ್ತೀಚೆಗಷ್ಟೆ ‘ಅಯ್ಯೋ ವಿಧಿಯೇ’ ಎಂದು ಸಾಗುವ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಈ ಸಾಂಗ್‌ಗೆ ನಟ ಜಗ್ಗೇಶ್ ಧ್ವನಿಯಾಗಿರುವುದು ವಿಶೇಷ. ಸುಜಿತ್ ವೆಂಕಟರಾಮಯ್ಯ ಬರೆದಿರುವ ಹಾಡಿಗೆ ಡಾಸ್ಮೋಡ್ ಸಂಗೀತ ಗಮನಸೆಳೆಯುತ್ತದೆ.

ಅಯ್ಯೋ ವಿದ್ಯಾಪತಿ ವಿಧಿಯೇ...: ನಟ ಜಗ್ಗೇಶ್ ಧ್ವನಿಯಲ್ಲಿ ಮೂಡಿಬಂದ ಚಿತ್ರದ ಮೊದಲ ಸಾಂಗ್
ರಿಲೀಸ್ ಡೇಟ್ ನೀವೆ ಹೇಳಿ: ‘ವಿದ್ಯಾಪತಿ’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ, ನಟ ಧನಂಜಯ್, ಚಿತ್ರವನ್ನು ಯಾವಾಗ ರಿಲೀಸ್ ಮಾಡಬೇಕು ಎಂಬುದಕ್ಕೆ ಒಂದೊಳ್ಳೆ ದಿನಾಂಕವನ್ನು ನೀವೆ ತಿಳಿಸಿ ಎಂದು ಪ್ರೇಕ್ಷಕರಿಗೆ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಈ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಡಿಸೆಂಬರ್ ಮಾಸಾಂತ್ಯಕ್ಕೆ, ಇನ್ನು ಕೆಲವರು ಸಂಕ್ರಾಂತಿ ಇಲ್ಲವೇ ಶಿವರಾತ್ರಿ ಹಬ್ಬಕ್ಕೆ ಚಿತ್ರವನ್ನು ಬಿಡುಗಡೆ ಮಾಡಿ ಎಂದು ತಿಳಿಸಿದ್ದಾರೆ.

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…