ಅಯ್ಯಪ್ಪಸ್ವಾಮಿ ಉತ್ಸವಮೂರ್ತಿ ಮೆರವಣಿಗೆ

ಬೇಲೂರು : ಇಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ಮೊದಲ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ಜರುಗಿತು.

ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ತಯಾರಿಸಿರುವ ಜಮಖಂಡಿ ರಥದಲ್ಲಿ ಕುಳ್ಳಿರಿಸಿ ಮಂಗಳವಾದ್ಯ, ಚಂಡೆಮೇಳ, ಗೊಂಬೆ ಕುಣಿತ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಶ್ರೀ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಯಮಸಂಧಿ ಪಾಪಣ್ಣ, ಉಪಾಧ್ಯಕ್ಷ ಬಳ್ಳೂರು ಉಮೇಶ್, ಖಜಾಂಚಿ ದೇವರಾಜು ಹಾಗೂ ನೂರಾರು ಭಕ್ತರು ಹಾಜರಿದ್ದರು.