Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ

Thursday, 12.07.2018, 3:01 AM       No Comments

ಜಗನ್ಮಾತೆಯ ಶಕ್ತಿ ಸಂಚಯನಗೊಂಡ ಪುಣ್ಯಸ್ಥಳ ಅಮ್ಮನಘಟ್ಟ. ಶ್ರೀ ಜೇನುಕಲ್ಲಮ್ಮ ಇರುವುದು ಚಿತ್ತಾಕರ್ಷಕ ಮಲೆನಾಡಿನ ಪ್ರಕೃತಿ ಐಸಿರಿ ನಡುವೆ. ನಾಲ್ಕೂ ದಿಕ್ಕಿನಲ್ಲಿ ಕೋಣನಮನೆ ಗುಡ್ಡ, ಹಳೆ ಅಮ್ಮನಘಟ್ಟ, ಕೋಡೂರು ಘಟ್ಟ ಮತ್ತು ಕಾಗಿ ಘಟ್ಟಗಳು ಸುತ್ತುವರಿದಿವೆ. ಅಮ್ಮನಘಟ್ಟ ಗಿಡಮೂಲಿಕೆಗಳ ತವರೂ ಹೌದು. ಈ ವಿಶಿಷ್ಟ ಕ್ಷೇತ್ರದ ಪರಿಚಯವಿದು.

| ಎನ್. ಸೋಮಶೇಖರ್ ಶಿವಮೊಗ್ಗ

ಕಣ್ಣು ಹಾಯಿಸಿದಷ್ಟೂ ಕಾಡಿನ ಮನಮೋಹಕ ನೋಟ, ಪೂರ್ತಿ ಕಲ್ಲುಬಂಡೆಯಿಂದ ಆವೃತವಾದ ದೇವಸ್ಥಾನ, ದೇವಸ್ಥಾನದ ಬಾಗಿಲು ಹೊರತುಪಡಿಸಿ ಇಡೀ ಬಂಡೆಯೇ ದೇವಸ್ಥಾನಕ್ಕೆ ಹೊದಿಕೆ… ಇಂತಹ ಅಪರೂಪದ ಪ್ರಕೃತಿದತ್ತ ದೇವಸ್ಥಾನವೇ ಶ್ರೀ ಜೇನುಕಲ್ಲಮ್ಮ ಕ್ಷೇತ್ರ. ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮ್ಮನಘಟ್ಟ ಬೆಟ್ಟವೇ ಜೇನುಕಲ್ಲಮ್ಮ ದೇವಸ್ಥಾನ. ಸುತ್ತಲಿನ ಸುಂದರ ಪರಿಸರ ಹಾಗೂ ಬಂಡೆಗಳಿಂದ ಕೂಡಿರುವ ದೇಗುಲ ಪ್ರತಿನಿತ್ಯ ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

ಜೇನುಕಲ್ಲಮ್ಮನ ಹಿನ್ನೆಲೆ

ಜೇನು, ಕಲ್ಲು, ಅಮ್ಮ ಎಂಬ ಮೂರು ವಿಭಿನ್ನ ಶಬ್ದಾರ್ಥಗಳ ಸಂಗಮವೇ ಮಹಾಮಾತೆ ಜೇನುಕಲ್ಲಮ್ಮ. ಅಂದರೆ ಕಡಿದಾದ ಕಲ್ಲಿನ ಬೆಟ್ಟ, ಅಲ್ಲಲ್ಲಿ ಕಟ್ಟಿರುವ ಹೆಜ್ಜೇನುಗಳ ಮೊತ್ತ, ಮಧ್ಯೆ ವಿರಾಜಮಾನಳಾಗಿದ್ದಾಳೆ ಅಮ್ಮ. ಅದಕ್ಕೆ ಮಲೆನಾಡ ಜನರ ಬಾಯಲ್ಲಿ ಈಕೆ ಜೇನುಕಲ್ಲಮ್ಮ ಎಂದು ಕರೆಸಿಕೊಂಡಳು. ದೇವಿಗೆ ರೇಣುಕಾ ದುರ್ಗಾಪರಮೇಶ್ವರಿ ಎಂದೂ ಕೆಲವರು ಕರೆಯುತ್ತಾರೆ. ಹೊಸನಗರ ಭಾಗದ ದೀವರ ಜನಾಂಗಕ್ಕೆ ಅಮ್ಮ ಕುಲದೈವ. ಜೇನುಕಲ್ಲಮ್ಮ ಎಂದರೆ ವಿಶೇಷ ಪ್ರೀತಿ, ನಂಬಿಕೆ ಇವರಿಗೆ. ದೇವಿಗೆ ಹರಕೆ ಮಾಡಿಕೊಂಡರೆ ಅಮ್ಮನ ಆಶೀರ್ವಾದ ಬಲದಿಂದಲೇ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ನವಜೋಡಿ ಜೇನುಕಲ್ಲಮ್ಮನ ದರ್ಶನ ಪಡೆಯುವುದು ಕಡ್ಡಾಯ ನಿಯಮ. ಎಲ್ಲ ವರ್ಗದ ಜನರೂ ಆಗಮಿಸಿ ಅಮ್ಮನ ದರ್ಶನ ಪಡೆಯುತ್ತಾರೆ.

ಹರಕೆಯಲ್ಲೂ ವೈವಿಧ್ಯ

ದೇವಿಗೆ ಹರಕೆಯಲ್ಲೂ ಅನೇಕ ವೈವಿಧ್ಯತೆಗಳಿವೆ. ಬೆಳ್ಳಿ, ದನಕರು, ಬೆಣ್ಣೆ ಒಪ್ಪಿಸುವುದು, ಉಡಿ ತುಂಬುವುದು – ಹೀಗೆ ವಿವಿಧ ರೀತಿಯಲ್ಲಿ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ಮೈಲಿಗೆಯಿಂದ ಬಂದರೆ ಹಿಂಭಾಗದ ಬಂಡೆಯಲ್ಲಿ ಗೂಡು ಕಟ್ಟಿಕೊಂಡಿರುವ ಜೇನ್ನೊಣಗಳು ಕಚ್ಚತೊಡಗುತ್ತವೆ ಎಂಬ ಪ್ರತೀತಿ ಇದೆ. ದೇವಾಲಯ ಸಮೀಪದ ಗುಹೆಯಲ್ಲಿ ಪರಶುರಾಮ ತಪಸ್ಸು ಮಾಡಿದ, ಜಮದಗ್ನಿ ಒಂದೇ ಬಂಡೆಯ ಕೆಳಗೆ ಕುಳಿತು ದೇವರನ್ನು ಪ್ರಾರ್ಥಿಸಿದ, ಬಂಡೆ ಸೀಳಿ ಅಮ್ಮ ನೆಲೆಸಿದ್ದಾಳೆಂಬ ನಂಬಿಕೆಗಳಿವೆ.

ಅಮ್ಮನಘಟ್ಟ ಕ್ಷೇತ್ರದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಬೆಳಗ್ಗೆ 10ರಿಂದ 11.30ರ ನಡುವೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಪೂಜೆ ನಡೆಯುತ್ತದೆ. ಉಡಿ ತುಂಬುವುದು, ವಾಹನಪೂಜೆ, ಚಂಡಿಕಾ ಹವನ, ಚಂಡಿಕಾ ಪಾರಾಯಣ, ಸತ್ಯನಾರಾಯಣ ವ್ರತ ಮಾಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ದೇವರಿಗೆ ನವರಾತ್ರಿ ವೇಳೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಎಡೆ ನೈವೇದ್ಯ ಸಲ್ಲಿಸಲಾಗುತ್ತದೆ.

ಹೋಗುವ ಮಾರ್ಗ

ಶ್ರೀ ಜೇನುಕಲ್ಲಮ್ಮ ದೇವಸ್ಥಾನಕ್ಕೆ ಶಿವಮೊಗ್ಗದಿಂದ 85 ಕಿ.ಮೀ. ಹೊಸನಗರಕ್ಕೆ 70 ಕಿ.ಮೀ., ಹೊಸನಗರದಿಂದ ರಿಪ್ಪನ್​ಪೇಟೆ ಮಾರ್ಗದಲ್ಲಿ 12 ಕಿ.ಮೀ. ಸಾಗಿದರೆ ಕೋಡೂರು ಸಿಗುತ್ತದೆ. ಅಲ್ಲಿಂದ ಶ್ರೀಕ್ಷೇತ್ರ 3 ಕಿ.ಮೀ. ದೂರದಲ್ಲಿದೆ. ಬೈಕ್, ಕಾರಿನಂತಹ ಮಧ್ಯಮ ಗಾತ್ರದ ವಾಹನಗಳು ದೇವಾಲಯದ ಆವರಣದವರೆಗೂ ಹೋಗುತ್ತವೆ. ಜಾತ್ರೆಯ ಸಂದರ್ಭಗಳಲ್ಲಿ ಬಸ್ ವ್ಯವಸ್ಥೆ ಇರುತ್ತದೆ.

ಧಾರ್ವಿುಕ ಪ್ರವಾಸಿತಾಣ

ಹೊಸ ಅಮ್ಮನಘಟ್ಟ ಬೆಟ್ಟವು ಅಮ್ಮ ನೆಲೆಸಿರುವ ಪ್ರದೇಶ. ಮೊದಲು ಅನತಿ ದೂರದಲ್ಲಿ ಹಳೆ ಅಮ್ಮನಘಟ್ಟದಲ್ಲಿ ನೆಲೆಸಿದ್ದಳಂತೆ. ದೇವಿಯ ಪೂಜೆ ನಡೆಸಿದ ಕುರುಹುಗಳೂ ಅಲ್ಲಿವೆ. ನಂತರ ಮೈಲಿಗೆ ಆಗಿದ್ದರಿಂದ ಅಮ್ಮ ಹೊಸ ಅಮ್ಮನಘಟ್ಟಕ್ಕೆ ಕಲ್ಲಿನ ತೇರಿನಲ್ಲಿ ಬಂದು ನೆಲೆಸಿದಳು ಎಂದು ಹಿರಿಯರು ಹೇಳುತ್ತಾರೆ.ಹೊಸ ಅಮ್ಮನಘಟ್ಟದ ಬಂಡೆಗಳ ಮೇಲೆ ಕಲ್ಲಿನ ರಥದ ಚಕ್ರ ಹರಿದುಬಂದ ಮಾರ್ಗದ ಗುರುತನ್ನು ಈಗಲೂ ನೋಡಬಹುದು. ಆಕೆಯ ವಾಹನವಾದ ಹುಲಿ ಗುಹೆಯೊಂದರಲ್ಲಿ ಈಗಲೂ ವಾಸವಾಗಿದೆಯಂತೆ. ಅದನ್ನು ಹುಲಿ ಗವಿ ಎಂದೇ ಗುರುತಿಸಲಾಗುತ್ತಿದೆ. ಬೆಟ್ಟದ ಮೇಲಿಂದ ಹುಲಿ ಗರ್ಜನೆ ಕೇಳಿಬರುತ್ತದೆ ಎನ್ನುತ್ತಾರೆ ಪ್ರಧಾನ ಅರ್ಚಕ ಕೆ.ಎಂ. ಭಾಸ್ಕರ ಜೋಯ್್ಸ

Leave a Reply

Your email address will not be published. Required fields are marked *

Back To Top