ಅಮೃತ ಬಿಂದು

ಶ್ರೀ ಶೈವಾಗಮ

ತತಃ ಸರ್ವಂ ಪರಿತ್ಯಜ್ಯ ಮಹಾಲಿಂಗೈಕತತ್ಪರಃ | ನಿರ್ಮಮೋ ನಿರಹಂಕಾರಸ್ತದ್ಧ್ಯಾನನಿರತೋ ಭವೇತ್ ||

ಇದು ಮಹಾಲಿಂಗದ ಧ್ಯಾನಪದ್ಧತಿಯ ವಿವರಣೆ. ಮೊದಲು ನಮ್ಮ ಲಿಂಗದ ಹೊರತಾಗಿರುವ ಇತರ ಎಲ್ಲ ಸಂಗತಿಗಳನ್ನು ಮನದಿಂದ ಹೊರಹಾಕಬೇಕು. ಮಹಾಲಿಂಗವೇ ಸರ್ವಶ್ರೇಷ್ಠ, ಅದರ ಧ್ಯಾನದಿಂದ ಸವೋತ್ಕೃ್ಟ ಲಾಭವಾಗುತ್ತದೆ ಎಂದು ದೃಢವಾಗಿ ನಂಬಿ ಏಕನಿಷ್ಠೆಯಿಂದ ಮಗ್ನನಾಗಬೇಕು. ಮನದಲ್ಲಿರುವ ಮಮಕಾರ-ಅಹಂಕಾರ ಭಾವನೆಗಳನ್ನು ಬದಿಗಿಟ್ಟು ಮಹಾಲಿಂಗದ ಧ್ಯಾನನಿರತನಾಗಬೇಕು. ನಮ್ಮ ಮನಸ್ಸಿನಲ್ಲಿರುವ ನನ್ನವರು-ನನ್ನದು ಎಂಬ ಭಾವನೆಯೇ ಮಮಕಾರ. ತನ್ನ ಶರೀರ ಇಂದ್ರಿಯಾದಿಗಳ ಬಗೆಗಿನ ಅತಿ ಅಭಿಮಾನವೇ ಅಹಂಕಾರ. ಧ್ಯಾನಕ್ಕೆ ಪ್ರತಿಬಂಧಕಗಳಾದ ಇವೆರಡಕ್ಕೂ ಅವಕಾಶ ನೀಡಬಾರದು.

| ಚಂದ್ರಜ್ಞಾನಾಗಮ (3.22) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *