ಅಮೃತ ಬಿಂದು

ಶ್ರೀ ಶೈವಾಗಮ

ಋತಂ ಸತ್ಯಂ ಪರಂ ಬ್ರಹ್ಮ ಸಚ್ಚಿದಾನಂದಲಕ್ಷಣಂ | ಅನನ್ಯಪರಮಂ ಬ್ರಹ್ಮ ತದತೋ ಧ್ಯೇಯಮಾಸ್ತಿಕೈಃ ||

ಆ ಮಹಾಲಿಂಗವು ಋತವೂ, ತ್ರಿಕಾಲಗಳಲ್ಲಿ ಅಬಾಧಿತರೂಪದಲ್ಲಿರುವುದರಿಂದ ಸತ್ಯವೂ, ಸತ್-ಚಿತ್-ಆನಂದರೂಪವೂ, ಅದಕ್ಕೆ ಸಮಾನ ಅಥವಾ ಅದಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲದಿರುವುದರಿಂದ ಅನನ್ಯವೂ, ಅದೇ ಎಲ್ಲಕ್ಕಿಂತ ಶ್ರೇಷ್ಠವಾಗಿರುವುದರಿಂದ ಪರಮವೂ, ಸರ್ವವ್ಯಾಪಕವಾಗಿರುವುದರಿಂದ ಬ್ರಹ್ಮರೂಪವೂ ಆಗಿದೆ. ಆದ್ದರಿಂದ ಆಸ್ತಿಕರು ಅದನ್ನು ಶ್ರದ್ಧೆಯಿಂದ ಧ್ಯಾನಿಸಬೇಕು. ಸಾಮಾನ್ಯವಾಗಿ ಮನುಷ್ಯನು ಯಾವುದನ್ನು ಯಾವಾಗಲೂ ಧ್ಯಾನಿಸುತ್ತಾನೆಯೋ ಅದೇ ತಾನಾಗುತ್ತಾನೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಿದೆ. ಮಹಾಲಿಂಗದ ಧ್ಯಾನದಿಂದ ನಾವು ಮಹಾಲಿಂಗವೇ ಆದಾಗ ಕೊನೆಗೆ ಯಾವ ರೀತಿಯ ಸ್ವರೂಪವನ್ನು ಪಡೆಯುತ್ತೇವೆಂದು ತಿಳಿಸಲು ಅದರ ಸ್ವರೂಪವನ್ನು ವಿವರಿಸಲಾಗಿದೆ.

| ಚಂದ್ರಜ್ಞಾನಾಗಮ (3.21) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *