ಅಮೃತ ಬಿಂದು

ಶ್ರೀ ಶೈವಾಗಮ

ಮಾತಾ ದೇವೀ ಬಿಂದುರೂಪಾ ನಾದರೂಪಃ ಶಿವಃ ಪಿತಾ | ಪಿತೃಭ್ಯಾಂ ದತ್ತಮೈಶ್ವರ್ರ್ಯಂ ಯಥಾ ಭೋಗಾಯ ಕಲ್ಪ್ಯೇ ||

ತಯೋರೈಶ್ವರ್ಯಲಾಭಾರ್ಥಂ ಶಿವಲಿಂಗಂ ಪ್ರಪೂಜಯೇತ್ ||

ಬಿಂದುರೂಪಳಾದ ಶಕ್ತಿಯೇ ತಾಯಿ. ನಾದರೂಪಿ ಶಿವನೇ ತಂದೆ. ಲೋಕವ್ಯವಹಾರದಲ್ಲಿ ತಂದೆ-ತಾಯಿ ಸಂಪಾದಿಸಿದ ಸಂಪತ್ತಿಗೆ ಅವರ ಸಂತಾನವೇ ವಾರಸುದಾರ. ಅದರಂತೆ ಶಿವಶಕ್ತಿಯರ ಸೃಷ್ಟಿಯಾದ ಈ ಜಗದ ಭೋಗಗಳನ್ನು ಅನುಭವಿಸಲು ಅವರ ಸಂತಾನರೂಪದಲ್ಲಿರುವ ಜೀವಿಗಳೇ ವಾರಸುದಾರರು. ಆದರೆ ತಂದೆ-ತಾಯಿಯ ವೈಯಕ್ತಿಕವಾದುದನ್ನು ಪಡೆಯಲು ಸೇವಾದಿಗಳನ್ನು ಮಾಡಿ ಅವರ ವಿಶೇಷ ಪ್ರೀತಿಗೆ ಪಾತ್ರರಾಗಬೇಕಾಗುತ್ತದೆ. ಅದರಂತೆ ಶಿವ-ಶಕ್ತಿಯರ ವಿಶೇಷ ಐಶ್ವರ್ಯ ಪಡೆಯಲು ಅವರ ರೂಪವಾದ ಲಿಂಗವನ್ನು ಶ್ರದ್ಧೆಯಿಂದ ಪೂಜಿಸಬೇಕು.

| ಚಂದ್ರಜ್ಞಾನಾಗಮ (3.17) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *