ಅಮೃತ ಬಿಂದು

ಶ್ರೀ ಶೈವಾಗಮ

ಸಂಭೋಜಯಿತ್ವಾ ಸ್ವಗುರುಂ ಪಶ್ಚಾತ್ ಭುಂಜೀತ ಬುದ್ಧಿಮಾನ್ | ಗುರೋಃ ಪುರಸ್ತಾದ್ಯೋ ಭುಂಕ್ತೇ ಗುರುದ್ರೋಹೀ ಸ ಉಚ್ಯತೇ ||

ತಾಂಬೂಲಮುತ್ತಮಂ ತಸ್ಮೈ ತತಃ ಪಾತ್ರೇಣ ಧಾಪಯೇತ್ | ಪಶ್ಚಾದಿಷ್ಟಾನಿ ವಸ್ತೂನಿ ದತ್ವಾ ನತ್ವಾ ಕ್ಷಮಾಪಯೇತ್ ||

ಬುದ್ಧಿವಂತ ಶಿಷ್ಯನು ಮೊದಲು ಗುರುವಿಗೆ ಊಟ ಮಾಡಿಸಿ ನಂತರ ತಾನು ಉಣ್ಣಬೇಕು. ಗುರುವಿಗಿಂತ ಮೊದಲೇ ಊಟ ಮಾಡುವ ಶಿಷ್ಯನು ಗುರುದ್ರೋಹಿ ಎನಿಸುತ್ತಾನೆ. ಹೀಗೆ ಮೊದಲು ಗುರುವಿಗೆ ಊಟ ಮಾಡಿಸಿದ ನಂತರ ಒಂದು ಪಾತ್ರೆಯಲ್ಲಿ ಉತ್ತಮ ಗುಣಮಟ್ಟದ ತಾಂಬೂಲವನ್ನು ಇಟ್ಟು ಅರ್ಪಿಸಬೇಕು. ಆನಂತರ ಅವನಿಗೆ ಇಷ್ಟವಾದ ವಸ್ತುಗಳನ್ನು ಕೊಟ್ಟು ನಮಸ್ಕರಿಸಿ; ಕೊಡುವ ವಸ್ತುಗಳಲ್ಲಿ, ಪದ್ಧತಿಯಲ್ಲಿ, ಮಾತನಾಡುವಲ್ಲಿ ಅಥವಾ ನೀಡಬೇಕಾದ ಗೌರವದಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ ಕ್ಷಮೆ ಇರಲಿ ಎಂದು ಕೋರಬೇಕು.

| ಚಂದ್ರಜ್ಞಾನಾಗಮ (2.24-25) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು