ಅಮೃತ ಬಿಂದು

ಶ್ರೀ ಶೈವಾಗಮ

ಸ್ವಾಚಾರ್ಯಚರಣದ್ವಂದ್ವಪ್ರಕ್ಷಾಲಿತಜಲಂ ಸದಾ | ಯಃ ಪಿಬೇತ್ ಧಾರಯೇತ್ ಭಕ್ತ್ಯಾ ಸರ್ವಪಾಪೈಃ ಪ್ರಮುಚ್ಯತೇ ||

ಚಂದನಂ ಚಾಕ್ಷತಂ ಪುಷ್ಪಂ ಸ್ವರ್ಣಂ ತಾಂಬೂಲಮಂಬರಂ | ಪಾತ್ರೇ ನಿಧಾಯ ಗುರವೇ ಶಿಷ್ಯೋ ದದ್ಯಾತ್ ನ ಪಾಣಿನಾ ||

ಮನೆಗೆ ಆಗಮಿಸಿದ ಗುರುವಿನ ಪಾದಗಳನ್ನು ತೊಳೆದು ಆ ನೀರನ್ನು ಸ್ವೀಕರಿಸಬೇಕು. ಗುರುವಿನ ಪಾದಗಳನ್ನು ತೊಳೆದ ನೀರನ್ನು (ಪಾದೋದಕ) ಯಾರು ಸದಾ ಸ್ವೀಕರಿಸುತ್ತಾರೋ ಅಥವಾ ಭಕ್ತಿಯಿಂದ ಧರಿಸುತ್ತಾರೋ ಅವರು ಎಲ್ಲ ಪಾಪಗಳಿಂದ ಮುಕ್ತರಾಗುತ್ತಾರೆ. ಪಾಪನಾಶ, ದೋಷನಾಶ, ಪುನರ್ಜನ್ಮ ದಹನ ಮತ್ತು ಕರ್ಮನಾಶವನ್ನು ಮಾಡುವುದೇ ಪಾದೋದಕ. ಗುರುವಿನ ಪಾದಪೂಜೆ ಮಾಡಿದ ಬಳಿಕ ಶಿಷ್ಯನು ಗಂಧ, ಅಕ್ಷತೆ, ಹೂವು, ಚಿನ್ನ, ತಾಂಬೂಲ, ವಸ್ತ್ರ ಮೊದಲಾದ ವಸ್ತುಗಳನ್ನು ಅರ್ಪಿಸಬೇಕು. ಇವುಗಳನ್ನು ಅರ್ಪಿಸುವಾಗ ಕೈಯಿಂದ ನೇರವಾಗಿ ಕೊಡದೆ, ಉತ್ತಮ ಪಾತ್ರೆಯಲ್ಲಿಟ್ಟು ಗೌರವಭಾವದಿಂದ ಅರ್ಪಿಸಬೇಕು.

| ಚಂದ್ರಜ್ಞಾನಾಗಮ (2.22 – 23) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು