ಅಮೃತವಾಣಿ

ವಿದ್ವಾನೇವ ವಿಜಾನಾತಿ ವಿದ್ವಜ್ಜನಪರಿಶ್ರಮಂ |

ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಮ್ ||

ವಿದ್ವಾಂಸರ ಅಧ್ಯಯನದ ಪರಿಶ್ರಮವನ್ನು ವಿದ್ವಾಂಸರೇ ತಿಳಿಯುತ್ತಾರೆ. ಹಗಲು-ಇರುಳು ಎನ್ನದೆ, ಆಹಾರ-ವಿಹಾರಗಳ ಬಗ್ಗೆ ಲಕ್ಷ್ಯಕೊಡದೆ ವ್ಯಾಕರಣ, ವೇದಾಂತಾದಿ ಶಾಸ್ತ್ರಗಳನ್ನು ಸತತ ಅಭ್ಯಾಸ ಮಾಡಿ ವಿದ್ಯಾಸಿದ್ಧಿ ಹೊಂದಿದವರ ಮಹತ್ವವು ಪಾಮರರಿಗೆ ತಿಳಿಯುವುದಾದರೂ ಹೇಗೆ? ಪ್ರಸವವೇದನೆಯ ಅರಿವು ಹೆತ್ತವಳಿಗೆ ಇರುತ್ತದೆ. ಸಂತಾನವನ್ನೇ ಪಡೆಯದವಳಿಗೆ ಆ ವೇದನೆಯನ್ನು ಅರಿಯಲು ಹೇಗೆ ಸಾಧ್ಯ? ಸ್ವತಃ ಅಧ್ಯಯನ ಮಾಡುವುದು ಉತ್ತಮ. ಅಕಸ್ಮಾತ್ ಮಾಡದೇ ಇದ್ದರೆ ಪ್ರಾಮಾಣಿಕರಾದ ವಿದ್ಯಾವಂತರನ್ನು ಗೌರವಿಸುವುದರಿಂದ ತನ್ನ ಗೌರವವೇ ಇಮ್ಮಡಿಯಾಗುತ್ತದೆ.

| ಕುವಲಯಾನಂದ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ