ಅಮೃತಬಿಂದು

ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಾ | ಲೀಯಂತೇ ಮೂಧಿರ್° ವೈ ವೇದಾಃ ಸಷಡಂಗಪದಕ್ರಮಾಃ ||

ಜಠರೇ ಲೀಯತೇ ಸರ್ವಂ ಜಗತ್ ಸ್ಥಾವರಜಂಗಮಂ | ಪುನರುತ್ಪದ್ಯತೇ ಯಸ್ಮಾತ್ ತತ್ ಬ್ರಹ್ಮ ಲಿಂಗಸಂಜ್ಞಕಮ್ ||

ಸಮುದ್ರದ ನೀರಿನಲ್ಲಿ ಪ್ರಕಟವಾದ ಆ ಪರಮೇಶ್ವರನ ದಿವ್ಯಲಿಂಗದ ಹೃದಯದಲ್ಲಿ ಎಲ್ಲ ದೇವತೆಗಳಲ್ಲಿ ಸವೋತ್ತಳಾದ ಗಾಯತ್ರಿಯು ವಾಸವಾಗಿರುತ್ತಾಳೆ. ಅದರ ಶಿರಸ್ಸಿನಲ್ಲಿ ಆರು ಅಂಗಗಳು, ಪದ, ಕ್ರಮ ಮುಂತಾದ ಪಾಠಗಳನ್ನೊಳಗೊಂಡ ಎಲ್ಲ ವೇದಗಳು ಲೀನವಾಗಿರುತ್ತವೆ. ಆ ಲಿಂಗದ ಮಧ್ಯಭಾಗದ ಜಠರದಲ್ಲಿ ಚರಾಚರಾತ್ಮಕವಾದ ಸಮಸ್ತ ಪ್ರಪಂಚ ಲೀನವಾಗಿದೆ ಮತ್ತು ಅದರಿಂದಲೇ ಮತ್ತೆ ಉತ್ಪನ್ನವಾಗುತ್ತದೆ. ಚರ ಎಂದರೆ ಚೇತನಾತ್ಮಕ, ಅಚರ ಎಂದರೆ ಜಡ ಎಂದರ್ಥ. ಸಮಸ್ತ ಪ್ರಪಂಚಕ್ಕೂ ಮೂಲ ಕಾರಣವೇ ಈ ಲಿಂಗ.

| ಚಂದ್ರಜ್ಞಾನಾಗಮ (3.7-8) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *