ಅಮೃತಬಿಂದು

ಶ್ರೀ ಶೈವಾಗಮ

ಕರೋತಿ ಸಂಪದಃ ಶಶ್ವತ್ ಜ್ಞಾನಂ ಚಾಪಿ ಸುಮೇಧಸಾಂ | ನಿಗ್ರಹಂ ಚಾಪ್ಯಸಾಧೂನಾಂ ಈಶಾನಃ ಶಿವಶಾಸನಾತ್ ||

ಧತ್ತೇ ತು ಧರಣೀಂ ಮೂರ್ಧ್ನಾ ಶೇಷಃ ಶಿವನಿಯೋಗತಃ ||

ಈಶಾನ್ಯ ದಿಕ್ಕಿನ ಅಧಿದೇವತೆ ಈಶಾನನು ಶಿವನ ಶಾಸನದಂತೆ ಸದಾ ಸಂಪತ್ತನ್ನು ಅನುಗ್ರಹಿಸುವುದರ ಜತೆಗೆ ಜ್ಞಾನಿಗಳಿಗೆ ಜ್ಞಾನವನ್ನು ಕೊಡುವ, ಸಾಧುಗಳಲ್ಲದವರನ್ನು ನಿಗ್ರಹಿಸುವ ಕಾರ್ಯ ಮಾಡುತ್ತಾನೆ. ಆದಿಶೇಷನು ಪಾತಾಳದ ಅಧಿದೇವತೆ. ಇವನು ಶಿವನ ಆದೇಶದಂತೆ ತನ್ನ ತಲೆಯ ಮೇಲೆ ಭೂಮಿಯನ್ನು ಹೊತ್ತು ನಿಲ್ಲುತ್ತಾನೆ. ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸಾಧುಸಜ್ಜನರನ್ನು ಅನುಗ್ರಹಿಸುವುದು ಎಷ್ಟು ಮುಖ್ಯವೋ ದುಷ್ಟರನ್ನು ನಿಗ್ರಹಿಸುವುದೂ ಅಷ್ಟೇ ಮುಖ್ಯ. ದುಷ್ಕರ್ವಿುಗಳಿಗೆ ಕಷ್ಟ ತಪ್ಪಿದ್ದಲ್ಲ ಎಂಬ ಸಂದೇಶ ಸರ್ವರಿಗೂ ಮನವರಿಕೆಯಾಗಬೇಕು. ಕಾರಣ ಈಶಾನನು ದುಷ್ಟನಿಗ್ರಹ ಮಾಡುತ್ತಾನೆ.

| ಚಂದ್ರಜ್ಞಾನಾಗಮ (1.31) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು