ಅಮೃತಬಿಂದು

ಕರಾತ್ ಪ್ರಮಾದವಶತಶ್ಚು ್ಯಂ ಲಿಂಗಮಧಃ ಪತೇತ್ | ತದಾ ವೈ ಕಿಂ ನು ಕರ್ತವ್ಯಂ ಪ್ರಾಯಶ್ಚಿತ್ತಂ ವದಸ್ವ ಮೇ ||

ಪ್ರಮಾದದಿಂದಾಗಿ ಇಷ್ಟಲಿಂಗವು ಕೈಜಾರಿ ಕೆಳಗೆ ಬಿದ್ದರೆ ಆಗ ಯಾವ ರೀತಿ ಪ್ರಾಯಶ್ಚಿತ್ತ ಆಚರಿಸಬೇಕೆಂದು ಪಾರ್ವತಿಯು ಶಿವನನ್ನು ಪ್ರಶ್ನಿಸುತ್ತಾಳೆ. ದೀಕ್ಷೆಯಲ್ಲಿ ಶ್ರೀಗುರುವು ಇಷ್ಟಲಿಂಗವನ್ನು ದಯಪಾಲಿಸಿದ ನಂತರ, ‘ನಿನ್ನ ಪ್ರಾಣಕ್ಕೆ ಸಮಾನವಾಗಿರುವ ಈ ಇಷ್ಟಲಿಂಗವನ್ನು ನಿನ್ನ ಪ್ರಾಣದಂತೆ ಧರಿಸು. ದೇಹದಿಂದ ಎಂದೂ ವಿಯೋಗವಾಗದಂತೆ ಜಾಗ್ರತೆ ವಹಿಸು’ ಎಂದು ಆದೇಶಿಸಿರುತ್ತಾನೆ. ಕಾರಣ ಇಷ್ಟಲಿಂಗವು ದೇಹದಿಂದ ವಿಯೋಗವಾದರೆ ಧಾರ್ವಿುಕ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಪ್ರಮಾದದಿಂದ ದೇಹದಿಂದ ಅಗಲಿದರೆ ಅದಕ್ಕೆ ಏನು ಪ್ರಾಯಶ್ಚಿತ್ತವೆಂಬುದು ಪಾರ್ವತಿಯ ಪ್ರಶ್ನೆ.

| ಕಾರಣಾಗಮ (ಕ್ರಿ.ಪಾ. 10.25) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *