ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಧೋನಿ ಕಣಕ್ಕೆ

ನವದೆಹಲಿ: ಎರಡು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿರುವ ಭಾರತದ ನಿಗದಿತ ಓವರ್ಗಳ ತಂಡದ ನಾಯಕ ಎಂ.ಎಸ್. ಧೋನಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಂದ್ಯಕ್ಕೆ ಮುನ್ನ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಜ. 15 ರಿಂದ ಪುಣೆಯಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ಮುನ್ನ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಮುಂಬೈನಲ್ಲಿ ನಡೆಯಲಿರುವ 2 ಅಭ್ಯಾಸ ಪಂದ್ಯಗಳಲ್ಲಿ ಅವರು ಭಾರತ ಎ ತಂಡದ ಪರ ಆಡಲಿದ್ದಾರೆ. 78 ದಿನಗಳ ನಂತರ ಅಂದರೆ, ನ್ಯೂಜಿಲೆಂಡ್ ವಿರುದ್ಧ ಸರಣಿಯ ಬಳಿಕ ಧೋನಿಗೆ ಪೂರ್ವಾಭ್ಯಾಸ ನಡೆಸಲು ಇದು ಉತ್ತಮ ಅವಕಾಶವಾಗಿದೆ. ಸಿಸಿಐ ಮೈದಾನದಲ್ಲಿ ಭಾರತ ಎ ತಂಡ ಜ. 10 ಮತ್ತು 12ರಂದು ಏಕದಿನ ಅಭ್ಯಾಸ ಪಂದ್ಯವನ್ನಾಡಲಿದೆ. ಧೋನಿ ಈಗಾಗಲೇ ರಣಜಿಯಲ್ಲಿ ನಾಕೌಟ್ ಪ್ರವೇಶಿಸಿರುವ ಜಾರ್ಖಂಡ್ ತಂಡದ ಜತೆ ಅಭ್ಯಾಸ ನಡೆಸುತ್ತಿದ್ದಾರೆ. -ಪಿಟಿಐ

 

Leave a Reply

Your email address will not be published. Required fields are marked *