Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಅಭಿಸಾರಿಕೆ ಪ್ರೇಮರಾಗ

Friday, 10.08.2018, 3:02 AM       No Comments

ನಾಯಕ ಅಭಿ, ನಾಯಕಿ ಸಾರಿಕೆ. ಹಾಗಾಗಿ, ಸಿನಿಮಾದ ಶೀರ್ಷಿಕೆ ‘ಅಭಿಸಾರಿಕೆ’! ಬರೀ ಇದಿಷ್ಟೇ ಅಲ್ಲ, ಇನ್ನಷ್ಟು ಕುತೂಹಲಕರ ಅಂಶಗಳು ಚಿತ್ರದಲ್ಲಿ ಇರಲಿವೆಯಂತೆ. ಕೆಲ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಈ ಸಿನಿಮಾಕ್ಕೆ ಈಗ (ಆ.10) ಬಿಡುಗಡೆಯ ಭಾಗ್ಯ ದೊರೆತಿದೆ. ಆ ಸಿನಿಮಾದ ಜತೆಗೆ ಇನ್ನಷ್ಟು ಸಿನಿಮಾಗಳು ತೆರೆಗೆ ಬರುತ್ತಿವೆ. ಆದರೆ, ಈ ಬಗ್ಗೆ ಚಿತ್ರತಂಡಕ್ಕೆ ಯಾವುದೇ ಅಂಜಿಕೆ ಇದ್ದಂತಿಲ್ಲ. ‘ನಮ್ಮ ಸಿನಿಮಾ ಉತ್ತಮವಾಗಿದೆ. ಖಂಡಿತ ಯಶಸ್ಸಾಗುತ್ತದೆ’ ಎಂಬ ವಿಶ್ವಾಸದಲ್ಲೇ ರಾಜ್ಯಾದ್ಯಂತ ಸುಮಾರು 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾನ್ನು ತೆರೆಗೆ ತರುತ್ತಿದೆ ‘ಅಭಿಸಾರಿಕೆ’ ಬಳಗ.

ವಿಶೇಷವೆಂದರೆ, ನಟಿ ಸೋನಲ್ ಮೊಂತೆರೊ ಅವರ ಮೊದಲ ಕನ್ನಡ ಸಿನಿಮಾ ‘ಅಭಿಸಾರಿಕೆ’. ‘ಈ ಸಿನಿಮಾವನ್ನು ಒಪ್ಪಿಕೊಂಡ ಮೇಲೆ ನನಗೆ ಸಾಕಷ್ಟು ಅವಕಾಶಗಳು ಬರತೊಡಗಿದವು. ಆದ್ದರಿಂದ ‘ಅಭಿಸಾರಿಕೆ’ ನನ್ನ ಪಾಲಿನ ಲಕ್ಕಿ ಸಿನಿಮಾ ಎನ್ನಬಹುದು. ಕನ್ನಡದಲ್ಲಿ ಈ ರೀತಿಯ ಸ್ಕ್ರಿಪ್ಟ್ ಇರುವ ಚಿತ್ರ ಇದುವರೆಗೂ ಬಂದಿಲ್ಲ. ಇದೊಂದು ವಿಭಿನ್ನ ಪ್ರಯೋಗ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ’ ಎನ್ನುವ ಸೋನಲ್, ಈ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಹೀರೋ-ಹೀರೋಯಿನ್ ಪ್ರೇಮದ ನಡುವೆ ಒಬ್ಬ ಖಳ ಪಾತ್ರ ಕೂಡ ಇದೆಯಂತೆ. ಸ್ಯಾಂಡಲ್​ವುಡ್​ನಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಗಮನಸೆಳೆದಿರುವ ಯಶ್ ಶೆಟ್ಟಿ ಸೈಕೋ ಖಳನಾಗಿ ಕಾಣಿಸಿಕೊಂಡಿದ್ದಾರೆ. ‘ನಾನಿಲ್ಲಿ ಸೈಕೋ ಸುನೀಲ್ ಎಂಬ ಪಾತ್ರ ಮಾಡುತ್ತಿದ್ದೇನೆ. ಸಿನಿಮಾ ಆರಂಭದಲ್ಲಿ ನಾನು ಕೆಟ್ಟವನೆಂಬಂತೆ ಕಾಣಿಸಿಕೊಳ್ಳುತ್ತೇನೆ. ಆದರೆ ನಾನು ಆ ರೀತಿ ವರ್ತಿಸುವುದಕ್ಕೂ ಕಾರಣ ಇರುತ್ತದೆ. ಸಿನಿಮಾ ಮುಗಿಯುತ್ತಿದ್ದಂತೆಯೇ ನಾನು ಒಳ್ಳೆಯ ಹುಡುಗ ಎಂಬುದು ತಿಳಿಯುತ್ತದೆ’ ಎಂದು ತಮ್ಮ ಪಾತ್ರದ ಕುರಿತು ಕುತೂಹಲ ಮೂಡಿಸುತ್ತಾರೆ ಯಶ್ ಶೆಟ್ಟಿ.

ಮಧುಸೂದನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ‘ಕಾಮಿಡಿ ಮತ್ತು ಹಾರರ್ ಅಂಶಗಳನ್ನು ಬಳಸಿಕೊಂಡು ಕಥೆಯನ್ನು ನಿರೂಪಣೆ ಮಾಡಿದ್ದೇವೆ. ಈ ಸಿನಿಮಾ ನನ್ನ ಬದುಕಿನ ದೊಡ್ಡ ಮೈಲಿಗಲ್ಲು ಆಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಕರಣ್ ಬಿ. ಕೃಪಾಕರ್ ಸಂಗೀತ ಸಂಯೋಜಿಸಿದ್ದಾರೆ. ಹೀರೋ ಆಗಿ ತೇಜಸ್ ಗೌಡ ಬಣ್ಣ ಹಚ್ಚಿದ್ದಾರೆ.

Leave a Reply

Your email address will not be published. Required fields are marked *

Back To Top