ಕೆ.ಆರ್.ಪೇಟೆ: ಕೇಂದ್ರ ಸಚಿವ ಕುಮಾರಣ್ಣ ಶಕ್ತಿಮೀರಿ ಓಡಾಡುತ್ತಿದ್ದಾರೆ, ಅವರು ರಾಜ್ಯ ಅಭಿವೃದ್ಧಿಗಾಗಿ ಚಿಂತಿಸಿದವರು, ಬೃಹತ್ ಉದ್ದಿಮೆಗಳನ್ನು ರಾಜ್ಯಕ್ಕೆ ತಂದು ಹೆಚ್ಚು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅವರೊಂದಿಗೆ ಕೈ ಜೋಡಿಸಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರ ನೀಡಬೇಕೇ ಹೊರತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಟಾಂಗ್ ನೀಡಿದರು.
ತಾಲೂಕಿನ ಹೊಸಹೊಳಲು ಗ್ರಾಮದ ಶ್ರೀಕೋಟೆ ಭೈರವೇಶ್ವರಸ್ವಾಮಿ ದೇವಸ್ಥಾನದ ರಾಜಗೋಪುರ ಮತ್ತು ಸಮುದಾಯದ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಕುಮಾರಣ್ಣ ಅವರು ತಮ್ಮ ವಯಸ್ಸಿನ ಶಕ್ತಿಮೀರಿ ಓಡಾಡುತ್ತಿದ್ದಾರೆ. ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ಅಪ್ರಸ್ತುತ. ಕಾಂಗ್ರೆಸ್ 138 ಸ್ಥಾನ ಗೆದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಬಣ ರಾಜಕೀಯ ದಿನನಿತ್ಯ ನಡೆಯುತ್ತಿದೆ. ನಮ್ಮ ಪಕ್ಷದ 17 ಶಾಸಕರು ಯಾರು ಹಣ, ಆಮಿಷಕ್ಕೆ ಆಸೆ ಪಡುವವರು ಇಲ್ಲ ಎಂದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಎಚ್.ಟಿ ಮಂಜು, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿರಾಮು, ಮುಖಂಡರಾದ ಮಲ್ಲೇಶ್, ಕಿರಣ್, ದೇವಾಲಯದ ಟ್ರಸ್ಟ್ ಅಧ್ಯಕ್ಷೆ ಮಂಜುಳಾ ಚನ್ನಕೇಶವ ಮತ್ತಿತರರಿದ್ದರು.