ಅಭಿವೃದ್ಧಿ ಕೆಲಸ ಬಹಿರಂಗಪಡಿಸಲಿ

ಚಿಂತಾಮಣಿ: ಹಣ, ಹೆಂಡ ಬಲದಿಂದಲೇ ಗೆಲ್ಲುತ್ತೇನೆಂದು ಬೀಗುತ್ತಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಈ ಬಾರಿ ಜನ ತಿರಸ್ಕರಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು.

ಕೋಲಾರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಬಹಿರಂಗಪಡಿಸಲಿ. ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಗೆ ಬರಲಿ ಎಂದು ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

35 ವರ್ಷಗಳಿಂದ ಸಂಸದರಾಗಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು? ವೇಮಗಲ್ ಬಳಿ ಇರುವ ನರಸಾಪುರದಲ್ಲಿ ಇಂಡಸ್ಟ್ರಿ ನಿರ್ಮಾಣ ಮಾಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುವ ಅವಕಾಶವಿದ್ದರೂ ಆ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಕವಿತಾ ಕುಟುಂಬಕ್ಕೆ ಸಾಂತ್ವನ: ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟ ಶ್ರೀರಾಮನಗರ ಬಡಾವಣೆಯ ಕವಿತಾ ನಿವಾಸಕ್ಕೆ ಡಿ.ಎಸ್.ವೀರಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತಳ ಪತಿ ಗಂಗಾಧರ್​ಗೆ 20ಸಾವಿರ ರೂ. ನೀಡಿದರು. ಘಟನೆ ನಡೆದು ಮೂರು ದಿನವಾದರೂ ಸರಿಯಾದ ತನಿಖೆ ನಡೆದಿಲ್ಲ. ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಸರ್ಕಾರದಿಂದ ಐದು ಲಕ್ಷ ರೂ. ಪರಿಹಾರ ನೀಡಲು ಒತ್ತಾಯಿಸುವುದಾಗಿ ಭರವಸೆ ನೀಡಿದರು. ಬಿಜೆಪಿ ಮುಖಂಡರಾದ ನಾ.ಶಂಕರ್, ಶ್ರೀನಿವಾಸಪ್ಪ, ರಾಜು, ಕಾಗತಿ ನಾಗರಾಜ್, ಶ್ರೀದೇವಿ ಮತ್ತಿತರರಿದ್ದರು.