ಕೊಳ್ಳೇಗಾಲ: ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಕಾರ್ಯಕರ್ತರ ಶ್ರಮಕ್ಕೆ ಜನರು ಗೆಲುವಿನ ಫಲ ನೀಡಲಿದ್ದಾರೆ ಎಂದು ಹನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮತದಾನದ ಬಗ್ಗೆ ಪ್ರತಿ ಬೂತ್ ಕಾರ್ಯಕರ್ತರು ಹಾಗೂ ಮುಖಂಡರು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ನೀಡಿರುವ ಪ್ರಣಾಳಿಕೆ ಜನರ ಮನಸ್ಸಿಗೆ ಹತ್ತಿರವಾಗಿದೆ. ಇದರ ಜತೆ ನನ್ನ ಪ್ರಾಮಾಣಿಕ ಕಾರ್ಯವನ್ನು ಜನರು ಒಪ್ಪಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳ ಸಮೀಕ್ಷೆಗಳಲ್ಲಿ ಅಧಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆೆ ಎಂಬ ಮಾಹಿತಿ ಇದೆ. ಪಕ್ಷದ ನಮ್ಮ ನಾಯಕರು ಬಹುಮತ ಬರುವುದಾಗಿ ಹೇಳಿದ್ದಾರೆ. ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಗೆಲುತ್ತದೆ ಎಂಬ ಭರವಸೆ ನೀಡಿದ್ದು, ನಾನೂ ಗೆಲುವಿನ ವಿಶ್ವಾಸದಲ್ಲಿದ್ದೇನೆ. ಮೇ 13 ರಂದು ಮತದಾರ ಪ್ರಭುಗಳ ನಿರ್ಣಯ ಏನಿದೆ ಎಂಬುದು ತಿಳಿಯಲಿದೆ ಎಂದರು.