ಸಿನಿಮಾ

ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ಅವರ ಅಣ್ಣನ ಮಗ ಶಿವಕುಮಾರ್ ಮಂಗಳವಾರ ಮತಯಾಚಿಸಿದರು.

ಕ್ಷೇತ್ರದ ಹೊನಗಾನಹಳ್ಳಿ ಗ್ರಾಪಂನಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರ ಗೆಲುವಿಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಲಿವೆ. ಮೂರು ಬಾರಿ ಶಾಸಕರು, ಸಂಸದರು ಹಾಗೂ ಸಚಿವರಾಗಿ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿಸಿದ್ದಾರೆ. ಆದರೆ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಎದುರಾಳಿಗಳ ಯಾವುದೇ ಅಪಪ್ರಚಾರ ನಡೆಯಲ್ಲ ಎಂದು ಹೇಳಿದರು.

ಕೋವಿಡ್ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಇಡೀ ಕ್ಷೇತ್ರಾದ್ಯಂತ ಸಂಚರಿಸಿ ನೊಂದವರ ನೋವಿಗೆ ಧ್ವನಿಯಾಗಿ ಕೆಲಸ ಮಾಡಿದ್ದರು. ದುದ್ದ, ಬಳಘಟ್ಟ, ಕಣಿವೆಕಟ್ಟೆ, ಶ್ಯಾದನಹಳ್ಳಿಯಲ್ಲಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಸಾವಿರಾರು ಎಕರೆ ಪ್ರದೇಶವನ್ನು ನೀರಾವರಿಗೊಳಿಸಿದ್ದಾರೆ ಎಂದು ತಿಳಿಸಿದರು.

ಹೊನಗಾನಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ, ಚಿನಕುರಳಿ ಗ್ರಾಪಂ ಅಧ್ಯಕ್ಷ ಪಾಪಣ್ಣ, ತಾಪಂ ಮಾಜಿ ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್