More

  ಅಭಿವೃದ್ಧಿ ಕಾರ್ಯಕ್ಕೆ ನೆರವು ಅಗತ್ಯ

  ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ವಿಶೇಷ ಅನುದಾನದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಜನರಿಗೆ ಮೂಲಭೂತ ಸೌಕರ್ಯ, ರಸ್ತೆಗಳ ಅಭಿವೃದ್ಧಿ, ಮಕ್ಕಳ ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕಾರ್ಯವನ್ನು ಬೆಂಬಲಿಸಬೇಕಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.

  ತಾಲೂಕಿನ ಮಾಲದಿನ್ನಿ ಗ್ರಾಮದಲ್ಲಿ 1 ಕೋಟಿ ರೂ., ಉಪ್ಪಾರಹಟ್ಟಿ ಗ್ರಾಮದಲ್ಲಿ 75ಲಕ್ಷ ರೂ., ಬೆಣಚಿನಮರ್ಡಿ ಗ್ರಾಮದಲ್ಲಿ 40 ಲಕ್ಷ ರೂ, ಕೊಳವಿ ಗ್ರಾಮದಲ್ಲಿ 70ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

  ಜಿಪಂ ಮಾಜಿ ಸದಸ್ಯ ಎಂ.ಎಲ್.ತೋಳಿನವರ, ಉಪ್ಪಾರಹಟ್ಟಿಯ ಸಿದ್ಧಾರೂಢ ಮಠದ ನಾಗೇಶ್ವರ ಸ್ವಾಮೀಜಿ, ಮಾಲದಿನ್ನಿ ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಹನುಮಂತ ದುರ್ಗನ್ನವರ, ಹನುಮಂತ ಖಿಚಡಿ, ಮಹಾದೇವ ಬಂಡಿ, ಮಹಾದೇವ ಸಿಂಗನ್ನವರ, ರಾಮಸಿದ್ದ ಮಜ್ಜಗಿ, ಸಿದ್ದಪ್ಪ ಗುದಿಗೊಪ್ಪ, ಯಮನಪ್ಪ ಬನಾಜ, ಕರೇಪ್ಪ ಕೊಳವಿ, ಬಾಳಯ್ಯ ಅಜ್ಜನವರ, ತಿಪ್ಪನ್ನ ಕಡಕೋಳ, ಲಕ್ಕಪ್ಪ ಮೆಳವಂಕಿ, ದಶರಥ ಖಿಚಡಿ, ಸಿದ್ದಪ್ಪ ಆಡಿನ, ಸುಭಾಸ ಬಂಡಿ, ಲಕ್ಕಪ್ಪ ಮಾಳಗಿ, ವಿಠ್ಠಕ ಗುಂಡಿ, ಬಾಳೇಶ ಗಿಡ್ಡನ್ನವರ, ಕರೇಪ್ಪ ಬಡಿಗವಾಡ, ಶಂಕರ ಒಣಕಿ, ಯು.ಪಿ.ಕಾಂಬಳೆ, ಶಿವಲಿಂಗ ಪಾಟೀಲ, ಗುತ್ತಿಗೇದಾರರಾದ ಶಿವಾನಂದ ಪೂಜೇರಿ, ರಾಮಸಿದ್ಧ ನಾಗನೂರ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts