ಸಿನಿಮಾ

ಅಭಿವೃದ್ಧಿಗಾಗಿ ಶ್ರಮಿಸಿದ ನನ್ನನ್ನು ಕೈಬಿಡಲ್ಲ

ಹುಣಸೂರು: ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಜನತೆ ನನ್ನ ಕೈ ಬಿಡುವುದಿಲ್ಲವೆಂಬ ಭರವಸೆ ಹೊಂದಿದ್ದೇನೆಂದು ಶಾಸಕ ಎಚ್.ಪಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಹರವೆ, ಮೋದೂರು, ಕೊತ್ತೇಗಾಲ ಮುಂತಾದ ಗ್ರಾಮಗಳಲ್ಲಿ ಗುರುವಾರ ಮತಯಾಚನೆ ನಡೆಸಿ ಮಾತನಾಡಿದರು. ನನ್ನ ಹದಿಮೂರುವರೆ ವರ್ಷಗಳ ಅಧಿಕಾರಾವಧಿಯಲ್ಲಿ ಪಕ್ಷಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಮೂರು ಚುನಾವಣೆಯಲ್ಲಿ ಕ್ಷೇತ್ರದ ಜನರು ತೋರಿಸಿದ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲಾಗುವುದಿಲ್ಲ. ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ನಡೆದುಕೊಂಡಿದ್ದೇನೆ. ಎಲ್ಲರನ್ನೂ ಗೌರವವಾಗಿ ಕಂಡಿದ್ದೇನೆ. ಎಲ್ಲ ಸಮಾಜಗಳನ್ನು ಒಗ್ಗಟ್ಟಿನಿಂದ ಕಂಡಿದ್ದೇನೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತವಾಗಿದ್ದು, ನನಗೆ ಸಚಿವನಾಗುವ ಎಲ್ಲ್ಲ ಅವಕಾಶವಿದೆ. ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಈ ಬಾರಿ ಮತದಾರರು ಕಾಂಗ್ರೆಸ್‌ಗೆ ಮತ ನೀಡುವ ನೀಡುವ ಮೂಲಕ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಗಿರೀಶ್, ರವಿಗೌಡ, ಹರವೆ ಗ್ರಾ.ಪಂ.ಅಧ್ಯಕ್ಷೆ ರೂಪ, ಮಲ್ಲೇಶ್ ನಾಯಕ್, ಚಂದ್ರಶೇಖರ್, ಸುರೇಶ, ಮಂಜು, ಮಹೇಂದ್ರ, ಗಣೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದರು. ನಂತರ ಕಲ್ಲಳ್ಳಿ ರಾಮೇನಹಳ್ಳಿ ಚಿಟ್ಟಕ್ಯಾತನಹಳ್ಳಿ, ಮೋದೂರು, ಮೋದೂರು ಪಿ. ಮತ್ತು ಎಂ.ಕೊಪ್ಪಲು, ಸಣ್ಣೇನಳ್ಳಿ, ನಾಗನಹಳ್ಳಿ ಕೊತ್ತೇಗಾಲ, ತಿಪ್ಪಲಾಪುರ ಯಮಗುಂಬ ತಮ್ಮಡಹಳ್ಳಿ, ಕಲ್‌ಬೆಟ್ಟ, ಯಶೋದಪುರ ಗ್ರಾಮಗಳಲ್ಲಿ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.

Latest Posts

ಲೈಫ್‌ಸ್ಟೈಲ್