ಚಿಕ್ಕೋಡಿ: ಮನೆ ಮನೆಗೆ ಆಯುರ್ವೇದ ಪರಿಚಯಿಸುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ‘ದೇಶ ಕಾ ಪ್ರಕೃತಿ ಪರೀಕ್ಷಾ’ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದೆ. ಎಲ್ಲರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಹೇಳಿದರು.
ಪಟ್ಟಣದ ಕದಳಿ ಭವನದಲ್ಲಿ ಬುಧವಾರ ಜರುಗಿದ ‘ದೇಶ ಕಾ ಪ್ರಕೃತಿ ಪರೀಕ್ಷಾ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸುಧಾರಿತ ಯೋಗಕ್ಷೇಮಕ್ಕೆ ಆಯುರ್ವೇದ ಜೀವನಶೈಲಿ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ಯಶಸ್ಸಿಗೆ ಸಹಕರಿಸಬೇಕು ಎಂದರು.
ಕೆಎಲ್‌ಇ ಸಂಸ್ಥೆಯ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಕಿರಣ ಮುತ್ನಾಳಿ ಮಾತನಾಡಿ, ನಾಗರಿಕರ ಮೊಬೈಲ್ಗಳಲ್ಲಿ ಪ್ರಕೃತಿ ಪರೀಕ್ಷೆ ಅಭಿಯಾನ ನಡೆಸಿ ಆಹಾರ ಮತ್ತು ವ್ಯಾಯಾಮದ ದಿನಚರಿ ಬಗ್ಗೆ ಮಾಹಿತಿ ಸ್ವೀಕರಿಸಲು ತಿಳಿಸಲಾಗುವುದು ಎಂದು ತಿಳಿಸಿದರು.
ಚಿಕ್ಕೋಡಿಯ ಕದಳಿ ಮಹಿಳಾ ವೇದಿಕೆ ಸದಸ್ಯರ ಪ್ರಕೃತಿ ಪರೀಕ್ಷೆ ಮಾಡಿ ಅದರ ಅನುಗುಣವಾಗಿ ಆಹಾರ ಮತ್ತು ವಿಹಾರದ ಬಗ್ಗೆ ತಿಳಿವಳಿಕೆ ನೀಡಲಾಯಿತು. ಮಹಾಂತೇಶ ಗುಡ್ನವರ, ಡಾ. ಬಾಹುಬಲಿ ಮಹಾಜನ ಇತರರು ಇದ್ದರು.