ಅಭಿಮಾನಿಗಳಿಂದ ಸಾಮಾಜಿಕ ಕಾರ್ಯವಾಗಲಿ

blank

ಕಾಗವಾಡ: ರಾಜಕೀಯ ನಾಯಕರ ಅಭಿಮಾನಿ ಬಳಗ ಸ್ಥಾಪನೆಗೊಂಡರೆ ಸಾಲದು, ಆ ಬಳಗದಿಂದ ಸಾಮಾಜಿಕ, ವಿಧಾಯಕ ಕಾರ್ಯಗಳು ಜರುಗಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಕಾಗವಾಡ ಪಟ್ಟಣದಲ್ಲಿ ಲಕ್ಷ್ಮಣ ಸವದಿ ಅವರ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ವೀರಮಾತಾ ಪುರಸ್ಕಾರ, ಆದರ್ಶಮಾತಾ, ಕರೊನಾ ಯೋಧರು ಹಾಗೂ ಪತ್ರಕರ್ತರ ಸತ್ಕಾರ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಲಕ್ಷ್ಮಣ ಸವದಿ ಅಭಿಮಾನಿ ಬಳಗವು ಗಡಿಯಲ್ಲಿ ವೀರ ಮರಣ ಹೊಂದಿದ ಯೋಧರ ತಾಯಂದಿರಿಗೆ, ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ತಾಯಂದಿರಿಗೆ, ಕರೊನಾ ಸಮಯದಲ್ಲಿ ಜೀವದ ಹಂಗು ತೊರೆದು, ಜನರ ಪ್ರಾಣ ರಕ್ಷಣೆಗೆ ಹಗಲಿರುಳು ಶ್ರಮಿಸಿದ ವೈದ್ಯರಿಗೆ ಹಾಗೂ ನೈಜ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರಿಗೆ ಸತ್ಕರಿಸಿ, ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ತಾಲೂಕಿನಲ್ಲಿರುವ ಪ್ರತಿಭಾವಂತ ಹಾಗೂ ಬಡ ಮಕ್ಕಳ ಶಾಲೆಯ ಖರ್ಚು-ವೆಚ್ಚಗಳನ್ನು ನಾವು ಭರಿಸಲು ಸಿದ್ದರಿದ್ದೇವೆ. ವಿದ್ಯಾರ್ಥಿಗಳು ಲಾಭ ಪಡೆಯಬೇಕುಎಂದು ಸಲಹೆ ನೀಡಿದರು.

ವೀರಮರಣ ಹೊಂದಿದ 7 ಯೋಧರ ತಾಯಂದಿರಿಗೆ ವೀರಮಾತಾ ಪುರಸ್ಕಾರ, ಗಡಿಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿರುವ 65 ಯೋಧರ ತಾಯಂದಿರಿಗೆ ಆದರ್ಶಮಾತಾ ಪುರಸ್ಕಾರ, 11 ವೈದ್ಯರಿಗೆ ಕರೊನಾ ವಾರಿಯರ್ಸ್‌, 25 ಪತ್ರಕರ್ತರಿಗೆ ಸಮಾಜ ದರ್ಪಣ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಜನರಿಗೆ ಸಮಾಜ ರತ್ನ ಪುರಸ್ಕಾರ, ಪ್ರಶಸ್ತಿ ಪತ್ರ, ಲಕ ನೀಡಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ರವೀಂದ್ರ ಪೂಜಾರಿ, ಎಲ್‌ಎಸ್ ಗ್ರೂಪ್ ಅಧ್ಯಕ್ಷ ಬಸವರಾಜ ಮಗದುಮ್ಮ, ಉಪಾಧ್ಯಕ್ಷ ಸಂಜಯ ಕರವ, ಕಾರ್ಯದರ್ಶಿ ಮಹೇಶಕುಮಾರ ಮಡಿವಾಳೆ, ಮಹಾವೀರ ಪಾಟೀಲ, ನೇಮಿನಾಥ ಚೌಗುಲೆ, ಪ್ರವೀಣ ಪಾಟೀಲ, ಜಿತು ಪಾಟೀಲ, ಸುನೀಲ ಕಿನಂಗೆ, ಸಂಜು ಪಿರಗಣ್ಣವರ ಇತರರು ಇದ್ದರು.

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…