ಅಬ್ದುಲ್ ವಾಹಿದ್ ಚಾಂಪಿಯನ್

ಬೆಂಗಳೂರು: ನಗರದ ಅಬ್ದುಲ್ ವಾಹಿದ್ ತನ್ವೀರ್ ಎಂಆರ್ಎಫ್ ಸೂಪರ್ಕ್ರಾಸ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಚಿಕ್ಕಜಾಲದಲ್ಲಿ ನಡೆದ ಫೈನಲ್ ಸುತ್ತಿನ ಬೈಕ್ ರೇಸ್ನಲ್ಲಿ ಅಬ್ದುಲ್ ಗಮನಾರ್ಹ ನಿರ್ವಹಣೆಯೊಂದಿಗೆ ಕ್ಲಾಸ್ 1 ವಿದೇಶಿ ಮುಕ್ತ ಗ್ರೂಪ್ ಹಾಗೂ ಕ್ಲಾಸಿಕ್ ಇಂಡಿಯನ್ ಎಕ್ಸ್ಪರ್ಟ್ ಬಿ ಗುಂಪಿನಲ್ಲಿ ರನ್ನರ್ಅಪ್ ಪಡೆದರೂ ಒಟ್ಟು ಅಂಕಗಳ ಆಧಾರದಲ್ಲಿ ಗರಿಷ್ಠ ಸ್ಥಾನ ಪಡೆದಿರುವುದರಿಂದ ಪ್ರಶಸ್ತಿಗೆ ಭಾಜನರಾದರು.

ಇದು ಅಬ್ದುಲ್ ಗೆದ್ದ ಮೊದಲನೇ ಸೂಪರ್ಕ್ರಾಸ್ ರಾಷ್ಟ್ರೀಯ ಚಾಂಪಿಯನ್ ಪಟ್ಟವಾಗಿದೆ. ಈ ಎರಡೂ ವಿಭಾಗಗಳಲ್ಲಿ ಅರವಿಂದ್ ಮೊದಲನೇ ಸ್ಥಾನ ಪಡೆದರೂ ಒಟ್ಟು ಅಂಕಗಳ ಆಧಾರದಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡರು. ಕ್ಲಾಸ್ 2 ನೊವೈಸ್ ಸಿ ಗುಂಪಿನ ವಿಭಾಗದಲ್ಲಿ ಇ.ಎಸ್. ಸಜಿತ್ ಮೊದಲ ಸ್ಥಾನ ಪಡೆದರೆ, ಕೆ. ನವನೀತ್ ರನ್ನರ್ ಅಪ್ ಪ್ರಶಸ್ತಿ ಪಡೆದರು. ಕ್ಲಾಸ್ 4 ಲೋಕಲ್ ಗ್ರೂಪ್ ಬಿ ವಿಭಾಗದಲ್ಲಿ ಮಿಂಚಿದ ನರೇಶ್ ವಿಎಸ್ ಚಾಂಪಿಯನ್ ಆದರೆ, ಇಮ್ರಾನ್ ಪಾಷಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕ್ಲಾಸ್ 5 ಇಂಡಿಯನ್ ಎಕ್ಸ್ಪರ್ಟ್ ಕ್ಲಾಸ್ ಸಿ ವಿಭಾಗದಲ್ಲಿ ನಟರಾಜ್ ಮತ್ತು ಯುವಕುಮಾರ್ ಕ್ರಮವಾಗಿ ಮೊದಲೆರಡು ಸ್ಥಾನ ಗೆದ್ದರು.

ಕ್ಲಾಸ್ 6 ಪ್ರೖೆವೇಟ್ ಎಕ್ಸ್ಪರ್ಟ್ಸ್ ಸಿ ಗುಂಪಿನಲ್ಲಿ ಗಮನ ಸೆಳೆದ ಜಗದೀಶ್ ಕುಮಾರ್ ಮೊದಲ ಸ್ಥಾನ ಪಡೆದರೆ, ಸೊಹೈಲ್ ಅಹ್ಮದ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುಣೆಯ ರುಗ್ವೇದ್ ಬರ್ಗಜಿ ಕ್ಲಾಸ್ 7 ಎಸ್ಎಕ್ಸ್ 2 ಗ್ರೂಪ್ ಎನಲ್ಲಿ ಮೊದಲ ಸ್ಥಾನ ಪಡೆದರೆ, ಯಶ್ ಪವಾರ್ ರನ್ನರ್ಅಪ್ ಆದರು. ಕ್ಲಾಸ್ 8 ಜೂನಿಯರ್ ಸೂಪರ್ ಕ್ರಾಸ್ ವಿಭಾಗದಲ್ಲಿ ಯುವರಾಜ್ ಕೊಂಡೆದೇಶ್ವುುಖ್ ಅಗ್ರಸ್ಥಾನ ಪಡೆದರೆ, ಕರಣ್ ಕಾರ್ಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಕ್ಲಾಸ್ 9 ಅಂತಾರಾಷ್ಟ್ರೀಯ ಮುಕ್ತ ವಿಭಾಗದಲ್ಲಿ ಅಮೆರಿಕದ ಬ್ರೖೆಸ್ ಸ್ಟೆವರ್ಟ್ ಚಾಂಪಿಯನ್ ಆದರೆ, ರಷ್ಯಾದ ಟೊಮಿನ್ ಇಗೊರ್ ರನ್ನರ್ಅಪ್ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *