
ಕಿಕ್ಕೇರಿ: ಸರಳ ಬದುಕು, ಎತ್ತರದ ಚಿಂತನಾಶೀಲ ಜೀವನವನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮೇರು ವ್ಯಕ್ತಿ ಡಾ.ಎಪಿಜೆ ಅಬ್ದುಲ್ ಕಲಾಂ ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಬಣ್ಣಿಸಿದರು.
ಸ್ಪಂದನಾ ಫೌಂಡೇಷನ್, ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಶನಿವಾರ ಹೋಬಳಿಯ ಸಾಸಲು ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಹುದ್ದೆ ಅಲಂಕರಿಸಿ ವಿಶ್ವವೇ ಭಾರತದತ್ತ ಮುಖ ಮಾಡುವಂತೆ ಮಾಡಿದರು ಎಂದು ಸ್ಮರಿಸಿದರು.
ಗಾಯಕಿಯರಾದ ಶಶಿಕಲಾ ಸುನೀಲ್, ಗಾಯಕಿ ಸೀಮಾ ರಾಯ್ಕರ್ ಮಾತನಾಡಿದರು. ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾಂರನ್ನು ಸ್ಮರಿಸಲಾಯಿತು. ಕರವೇ ತಾ. ಘಟಕ ಅಧ್ಯಕ್ಷ ಡಿ.ಎಸ್. ವೇಣು, ಗಾಯಕ ಶ್ರೀಧರ್ ಹಾಜರಿದ್ದರು.