Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅಪ್ರಾಪ್ತರ ಹೆಸರಲ್ಲಿ ಹೂಡಿಕೆ ಮಾಡಬಹುದೇ?

Wednesday, 25.10.2017, 3:01 AM       No Comments

| ಸುಧೀರ್ ಸಿ.ಎಸ್.

ಪ್ರಶ್ನೆ: ನನಗೀಗ 39 ವರ್ಷ. Systematic Investment Plan- SIP ಮೂಲಕ ‘ಇಕ್ವಿಟಿ ಡೈವರ್ಸಿಫೈಡ್ ಮ್ಯೂಚುವಲ್ ಫಂಡ್​ಗಳಲ್ಲಿ’ ಸುಮಾರು 2 ಲಕ್ಷ ರೂ.ಗಳನ್ನು 15ರ ವಯಸ್ಸಿನ ನನ್ನ ಮಗನ ಹೆಸರಲ್ಲಿ ಹೂಡಿಕೆ ಮಾಡಲು ಬಯಸಿರುವೆ. ಆದರೆ ಅಪ್ರಾಪ್ತ ಮಕ್ಕಳ ಹೆಸರಲ್ಲಿ ಹಣ ಹೂಡುವುದಕ್ಕೆ ಹೆತ್ತವರಿಗೆ ಅವಕಾಶವಿಲ್ಲವಾದ್ದರಿಂದ ಇದು ಕಾರ್ಯಸಾಧ್ಯವಲ್ಲ ಎಂಬುದು ನನ್ನ ಸ್ನೇಹಿತನ ಅಭಿಮತ. ಇದು ನಿಜವೇ? ಇದಕ್ಕೆ ಬೇರೇನಾದರೂ ಮಾಗೋಪಾಯವಿದೆಯೇ?

# ಅಪ್ರಾಪ್ತ ಮಗನ ಹೆಸರಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಬಹುದು ಮತ್ತು ಹೂಡಿಕಾ ಮೊತ್ತದ ಮೇಲೆ ಯಾವುದೇ ಪರಿಮಿತಿ/ನಿರ್ಬಂಧ ಇರುವುದಿಲ್ಲ. 500 ರೂ.ನಷ್ಟು ಚಿಕ್ಕಮೊತ್ತದೊಂದಿಗೂ ಹೂಡಿಕೆಗೆ ಮುಂದಾಗಬಹುದು. ಎಸ್​ಐಪಿಯಲ್ಲಿ ನೀವು ನಿಮಗಾದಷ್ಟು ಅಂದರೆ, ರೂ. 5,000 ಅಥವಾ ರೂ. 10,000ದಷ್ಟನ್ನು ಪ್ರತಿ ತಿಂಗಳು ಒಂದು ನಿಗದಿತ ದಿನಾಂಕದಂದು ಹೂಡಿಕೆ ಮಾಡಬಹುದು. 2 ಲಕ್ಷ ರೂ.ನಷ್ಟು ಹಣವನ್ನು ಒಂದೇ ಸಲ ಹೂಡಲು ಬಯಸಿದ್ದಲ್ಲಿ, ಅದು “Lump Sum’ ಹೂಡಿಕೆ ಆಗುತ್ತದೆ. ಮ್ಯೂಚುವಲ್ ಫಂಡ್ ಫೋಲಿಯೋ ಅಥವಾ ಖಾತೆಯಲ್ಲಿ ನಿಮ್ಮ ಮಗ ಮೊದಲನೆಯ ಮತ್ತು ಏಕಮಾತ್ರ ಹೂಡಿಕೆದಾರನಾಗುತ್ತಾನೆ. ಜಂಟಿ ಹೂಡಿಕೆದಾರರಿಗೆ ಈ ಖಾತೆಯಲ್ಲಿ ಅವಕಾಶವಿರುವುದಿಲ್ಲ. ಈ ಖಾತೆಗೆ ಸಂಬಂಧಿಸಿದಂತೆ ನೀವು (ಹೆತ್ತವರು) ಪೋಷಕರಾಗಿರುತ್ತೀರಿ ಅಷ್ಟೇ.

ಅಪ್ರಾಪ್ತರೊಬ್ಬರ ಹೆಸರಲ್ಲಿ ಮಾಡಲಾಗುವ ಹೂಡಿಕೆಗಳನ್ನು ಗುರುತಿಸಬೇಕಾದ್ದು ಅತಿಮುಖ್ಯ. ಮಗನ ವಯಸ್ಸು ಮತ್ತು ಜನ್ಮದಿನಾಂಕದ ವಿವರವನ್ನು ನೀವು ಒದಗಿಸಬೇಕಾಗುತ್ತದೆ; ಜನ್ಮ ದಿನಾಂಕವನ್ನು ಒಳಗೊಂಡಿರುವ ಜನನ ಪ್ರಮಾಣಪತ್ರ ಅಥವಾ ಪಾಸ್​ಪೋರ್ಟ್ ನಕಲನ್ನೂ ಈ ನಿಟ್ಟಿನಲ್ಲಿ ನೀಡಬಹುದು, ತನ್ಮೂಲಕ ಅಪ್ರಾಪ್ತನೊಂದಿಗಿನ ನಿಮ್ಮ ಸಂಬಂಧದ (ಅಪ್ಪ- ಮಗನ ಸಂಬಂಧದ) ಪುರಾವೆಯನ್ನೂ ತೋರಿಸಿದಂತಾಗುತ್ತದೆ. ನಿಮ್ಮ ಮಗನ ಹೆಸರಲ್ಲಿ ಮ್ಯೂಚುವಲ್ ಫಂಡ್ ಖಾತೆಯೊಂದನ್ನು ತೆರೆಯುವ ಸಂದರ್ಭದಲ್ಲಿ ಈ ಪುರಾವೆಯನ್ನು ತೋರಿಸಬೇಕಾಗುತ್ತದೆ. ಜತೆಗೆ Know Your Customer- KYC ಉಪಕ್ರಮಕ್ಕೆ ಸಂಬಂಧಿಸಿದ ಕಟ್ಟುಪಾಡುಗಳನ್ನೂ ಅನುಸರಿಸಬೇಕಾದ್ದು ಕಡ್ಡಾಯ. ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನೂ ಒದಗಿಸಬೇಕಾಗುತ್ತದೆ. ಹೆತ್ತವರು/ಪಾಲಕರಾಗಿರುವ ನಿಮ್ಮ ಖಾತೆಯ ಮೂಲಕ ಹೂಡಿಕೆ ಆಗುವುದರಿಂದ, ನಿಮ್ಮ ಬ್ಯಾಂಕ್​ನ ಅಂಗೀಕಾರ ಪತ್ರ (Acknowledgement Letter) ದೊಂದಿಗೆ Third-Party Declaration Form ಅನ್ನೂ ಸಲ್ಲಿಸಬೇಕಾದ್ದು ಅತ್ಯಗತ್ಯ.

ನಿಮ್ಮ ಮಗ 18ರ ವಯಸ್ಸನ್ನು ತಲುಪುತ್ತಿದ್ದಂತೆ ಏನಾಗುತ್ತದೆ?

# ಮ್ಯೂಚುವಲ್ ಫಂಡ್ ಯುನಿಟ್​ಗಳು ನಿಮ್ಮ ಮಗನ ಹೆಸರಲ್ಲಿರುವುದರಿಂದ, ಅವನಿಗೆ 18 ವರ್ಷವಾಗುತ್ತಿದ್ದಂತೆ ಆ ಯುನಿಟ್​ಗಳನ್ನು ನಗದಾಗಿ ಪರಿವರ್ತಿಸುವ ಅಧಿಕಾರ ನಿಮಗಿರುವುದಿಲ್ಲ.

# ನಿಮ್ಮ ಮಗ ಪ್ರಾಪ್ತ ವಯಸ್ಕನಾಗುವ ದಿನದವರೆಗೆ ಮಾತ್ರವೇ ನಿಮ್ಮ ‘ಎಸ್​ಐಪಿ’ ಸೂಚನೆ/ಆದೇಶವು ಸಿಂಧುವಾಗಿರುತ್ತದೆ.

# ನಿಮ್ಮ ಮಗನಿಗೆ 18 ವರ್ಷವಾದಾಗ, ಅವನ ‘ಪ್ಯಾನ್’ ಕಾರ್ಡ್/ಕೆವೈಸಿ ಸಂಬಂಧಿತ ಶಿಷ್ಟಾಚಾರಗಳನ್ನು ನೀವು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಅಪ್ರಾಪ್ತ ವಯಸ್ಕನಿಂದ ಪ್ರಾಪ್ತ ವಯಸ್ಕನ ವರ್ಗಕ್ಕೆ ಆತನ ಖಾತೆಯನ್ನು ಬದಲಿಸಬೇಕಾಗುತ್ತದೆ.

(ಲೇಖಕರು indianmoney.com ಸಂಸ್ಥಾಪಕರು ಮತ್ತು ಸಿಇಓ)

(ಪ್ರತಿಕ್ರಿಯಿಸಿ: [email protected])

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ-ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ-ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ.

ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

Leave a Reply

Your email address will not be published. Required fields are marked *

Back To Top