ಅಪ್ರಕಟಿತ ಶಿಲಾಶಾಸನ ಪತ್ತೆ

blank

ಚಿಕ್ಕಮಗಳೂರು: ತಾಲೂಕಿನ ಹಳೇ ಲಕ್ಯ ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿದ್ದ ಹೊಯ್ಸಳರ ಆರಂಭ ಕಾಲದ ದೊರೆ ವಿನಯಾದಿತ್ಯನ ಕಾಲದ ಅಪ್ರಕಟಿತ ಶಾಸನವೊಂದನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರAಗ ಅವರು ಶೋಧನೆ ಮಾಡಿದ್ದು, ಐತಿಹಾಸಿಕ ಹಳೇ ಲಕ್ಯದ ಧಾರ್ಮಿಕ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಹಳೇ ಲಕ್ಯ ಗ್ರಾಮದ ಈಶ್ವರ ದೇವಾಲಯದ ಬಲಭಾಗದ ಹಿಂದೆ ಗರ್ಭಗೃಹದ ಹೊರಗೋಡೆ ಪಕ್ಕದಲ್ಲಿ ಪಶ್ಚಿಮಾಭಿಮುಖವಾಗಿ ಅಂಗಾತ ಬಿದ್ದಿರುವ ಬಳಪದ ಕಲ್ಲಿನ ಈ ಶಾಸನವು ೩೯ ಇಂಚು ಎತ್ತರ, ೨೯ ಇಂಚು ಅಗಲ ಹಾಗೂ ೪ ಇಂಚು ದಪ್ಪದ ಅಳತೆ ಹೊಂದಿದೆ. ಈ ಶಾಸನದ ಮೇಲ್ಭಾಗದ ಅರ್ಧಚಂದ್ರಾಕೃತಿಯ ಫಲಕದಲ್ಲಿ ಕಿರೀಟಮುಖ, ಸೂರ್ಯ-ಚಂದ್ರ, ಶಿವಲಿಂಗ, ನಂದಿ ಮತ್ತು ಹಸು ಕರುಗಳ ಜೊತೆಗೆ ಕಾಳಾಮುಖ ಮುನಿಯೊಬ್ಬರ ಚಿತ್ರಣಗಳಿವೆ.
ಈ ಶಾಸನವು ಹೊಯ್ಸಳರ ಕಾಲದ ಕನ್ನಡ ಲಿಪಿ ಮತ್ತು ಭಾಷೆಯ ಇಪ್ಪತ್ತು ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಆರಂಭದ ಎರಡು ಸಾಲುಗಳನ್ನು ಅಗ್ರ ಫಲಕದ ಕೆಳಭಾಗದಲ್ಲಿ ಕಂಡರಿಸಿದ್ದು ಉಳಿದ ಹದಿನೆಂಟು ಸಾಲುಗಳನ್ನು ಶಾಸನದ ಮಧ್ಯ ಫಲಕದಲ್ಲಿ ಕಂಡರಿಸಲಾಗಿದೆ. ಅಕ್ಷರಗಳು ಅಲ್ಲಲ್ಲಿ ತ್ರುಟಿತವಾಗಿವೆ. ಹೊಯ್ಸಳರ ಆರಂಭ ಕಾಲದ ದೊರೆ ವಿನಯಾದಿತ್ಯನ ಆಡಳಿತ ಕಾಲದಲ್ಲಿ ಕೇತಗಾವುಂಡನ ಮಗ ಮಾಚಣ್ಣನು ಲೊಕ್ಕಿಯ ಹೊಯ್ಸಳೇಶ್ವರ ದೇವರ ನಿತ್ಯಪೂಜಾ ಸೇವಾರ್ಥಗಳ ವೆಚ್ಚಗಳಿಗಾಗಿ, ಪಿಂಗಳ ಸಂವತ್ಸರದ ಪುಷ್ಯ ಮಾಸದ ಸೋಮವಾರದಂದು-ಕೆರೆಯ ಕೆಳಗೆ ಒಂದು ಮತ್ತರು ಗದ್ದೆ, ಮೂಡಣ ಕೋಡಿಯ ಬಳಿಯ ಎರಡು ಮತ್ತರು ಬೆದ್ದಲೆ ಭೂಮಿ ಮತ್ತು ಬಡಗಣ ಹಳ್ಳದ ತೋಟಗಳನ್ನು ದೇವರ ಅರ್ಚಕರೂ ಮತ್ತು ಮಹಾತಪೋನಿಷ್ಠರೂ ಆಗಿದ್ದ ಬಮ್ಮರಾಸಿ ಪಂಡಿತರಿಗೆ ಧಾರಾಪೂರ್ವಕವಾಗಿ ಭಕ್ತಿಯಿಂದ ದಾನ ನೀಡಿದ ಕುರಿತು ಉಲ್ಲೇಖಿಸಲಾಗಿದೆ.
ಈ ದಾನ ಶಾಸನದ ಕಾಲ ಕ್ರಿ.ಶ.೧೦೭೮ ಎಂದು ತಿಳಿದುಬಂದಿದ್ದು, ಈ ಕುರಿತು ಇನ್ನಷ್ಟು ಹೆಚ್ಚಿನ ಸಂಶೋಧನೆ ಸಾಗಿದೆ. ಶಾಸನೋಕ್ತ ಅಂದಿನ ಲೊಕ್ಕಿಯೇ ಇಂದಿನ ಹಳೇಲಕ್ಯ ಹಾಗೂ ಈ ಶಾಸನೋಕ್ತ ಹೊಯ್ಸಳೇಶ್ವರ ದೇವಾಲಯವೇ ಇಂದಿನ ಈಶ್ವರ ದೇವಾಲಯವಾಗಿ ನಾಮಾಂತರವಾಗಿದೆ ಹಾಗೂ ಶಾಸನದ ಪಕ್ಕದ ನಾಗರಕಟ್ಟೆಯಲ್ಲಿ ಹೊಯ್ಸಳರ ಕಾಲದ ನರಬಲಿಯ ಸಂಕೇತವಾದ ಭೈರವ ಪಾದುಕೆಗಳ ಶಿಲ್ಪ ಸಹಾ ಕಂಡುಬAದಿದೆ.
ಪ್ರಾಚೀನ ಹಳೇಲಕ್ಯ ಗ್ರಾಮದಲ್ಲಿ ಕಾಲಭೈರವ ಆರಾಧನೆಯೂ ನಡೆಯುತ್ತಿತ್ತು ಎಂದು ಊಹಿಸಬಹುದು ಎಂದು ಸಂಶೋಧಕ ಪಾಂಡುರAಗ ಅವರು ತಿಳಿಸಿದ್ದಾರೆ. ಈ ಶಾಸನದ ಕುರಿತು ಮಾಹಿತಿ ನೀಡಿದ ಕಾರಕ್ಕಿ ಪ್ರೇಮಸಾಗರ್ ಕಳಸ ಅವರಿಗೂ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಲಕ್ಯಾ ಕ್ರಾಸ್‌ನ ಎಚ್.ಎಂ. ಕೃಷ್ಣಮೂರ್ತಿ, ಎಚ್.ಕೆ.ಯತೀಶ್, ಮಾರಿಕಣಿವೆಯ ಸಂಪತ್ ಕುಮಾರ್, ಶಾಸನ ಅಧ್ಯಯನ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತಿರುವ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಅವರಿಗೆ ಸಂಶೋಧಕ ಎಚ್.ಆರ್.ಪಾಂಡುರAಗ ಕೃತಜ್ಞತೆ ಸಲ್ಲಿಸಿದ್ದಾರೆ.

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…

ಪ್ರತಿದಿನ 1 ದಾಳಿಂಬೆ ಸೇವನೆಯಿಂದಾಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ದಾಳಿಂಬೆ ಪೋಷಕಾಂಶಗಳಿಂದ ತುಂಬಿದೆ ಎಂಬುದು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು…

ಧೂಮಪಾನ ಬಿಡಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲವೇ?; ನಿಮಗಾಗಿಯೇ ಈ ಟ್ರಿಕ್ಸ್​ | Health Tips

ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ ನಾವೆಲ್ಲರೂ ನಿಷ್ಕ್ರಿಯ ಧೂಮಪಾನಿಗಳು. ಏಕೆಂದರೆ ನಮ್ಮ ಸುತ್ತಲೂ ಯಾವಾಗಲೂ ಯಾರಾದರೂ ಸಿಗರೇಟ್…