
ಹುಳಿಯಾರು: ಹುಳಿಯಾರು ಸಮೀಪದ ಪುರದ ಮಠದ ಬಳಿ ಮಂಗಳವಾರ ರಾತ್ರಿ ಬೈಕ್ಗೆ ಬೊಲೆರೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋಬರಿಗೆ ಗಾಯಗಳಾಗಿವೆ. ಹುಳಿಯಾರು ಹೋಬಳಿಯ ಹೊನ್ನಯ್ಯನ ಪಾಳ್ಯದ ಚನ್ನಬಸವಯ್ಯ (75) ಮೃತ. ಮಂಗಳವಾರ ರಾತ್ರಿ ಹೊನ್ನಯ್ಯನಪಾಳ್ಯದ ಭಕ್ತರು ಪುರದಮಠ ಪೌರ್ಣಮಿಗೆ ತೆರಳುತ್ತಿದ್ದ ಸಂದರ್ಭ ಬೊಲೆರೂ ಚನ್ನಬಸವಯ್ಯ ಮತ್ತು ಲೋಕೇಶ್ ಅವರ ಬೈಕ್ಗೆ ಹಿಂದಿನಿಂದ ಗುದ್ದಿದೆ. ಬೈಕ್ನಿಂದ ಬಿದ್ದ ಚನ್ನಬಸವಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೋಕೇಶ್ಗೆ ಗಾಯಗಳಾಗಿದ್ದು ಹಾಸನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆಯು ಹೊನ್ನಯ್ಯನ ಪಾಳ್ಯದಲ್ಲಿ ಬುಧವಾರ ನಡೆಯಿತು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.