ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಮಹಾರಾಷ್ಟ್ರ ಗಡಿ ಭಾಗದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಬೈಕ್ ಹಿಂಬದಿ ಕಾರ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪ, ಮಗಳು ಸ್ಥಳದಲ್ಲೇ ಮತಪಟ್ಟು ಮಹಿಳೆ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ಮಹಾರಾಷ್ಟ್ರದ ಜತ್ತ ತಾಲೂಕಿನ ಮೆಂಡಿಗೇರಿ ಗ್ರಾಮದ ರಾಮು ಶಿವರಾಯ ಕುರಣೆ (50), ಇವರ ಮಗಳಾದ ಜಾನ್ಹವಿ ಕುರಣೆ (10) ಮೃತರು. ರಾಮುನ ಪತ್ನಿ ಮಿರಾಬಾಯಿ ಕುರಣೆ (45) ಗಾಯಗೊಂಡ ಮಹಿಳೆ. ಇವರು ಸ್ವಗ್ರಾಮದಿಂದ ಬೈಕ್ ಮೇಲೆ ಅನಂತಪುರದಲ್ಲಿರುವ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಗಾಯಗೊಂಡಿರುವ ಮಿರಾಬಾಯಿ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ನಾಗರಾಜ ಪಿ., ತನಿಖಾ ಸಹಾಯಕ ಪಿ.ಸಿ. ಕಂಟಿಗೊಂಡ, ಸಿಬ್ಬಂದಿ ಹಸನ ಕರೋಶಿ ಪರಿಶೀಲಿಸಿದರು.