20.4 C
Bangalore
Monday, December 9, 2019

ಅನ್ಯರಿಗೆ ಉಪಕಾರ ಮಾಡಿದರೆ ಕಷ್ಟ ದೂರ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ನುಷ್ಯ ಅನಾದಿಕಾಲದಿಂದಲೂ ಕಷ್ಟ ಅನುಭವಿಸುತ್ತಿದ್ದಾನೆ. ಆದರೆ, ತಾನು ಕಷ್ಟ ಅನುಭವಿಸುತ್ತಿರುವುದು ಏಕೆ ಎಂದು ಆತನಿಗೆ ಇಂದಿಗೂ ತಿಳಿದಿಲ್ಲ. ಅದನ್ನು ತಿಳಿದ ದಿನವೇ ಆತನ ಎಲ್ಲ ಕಷ್ಟಗಳು ದೂರವಾಗುವವು.

ನಾವು ಕಷ್ಟ ಏಕೆ ಅನುಭವಿಸುತ್ತಿದ್ದೇವೆ ಎಂದು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಸಂಸಾರದಲ್ಲಿ ಕಷ್ಟ ಭೋಗಿಸದೇ ಇರುವವರು ಯಾರು? ಕಷ್ಟವನ್ನು ಅನುಭವಿಸುವುದು ದುಃಖದ ಮಾತಲ್ಲ. ನಮ್ಮ ಕಷ್ಟ ಸೌಭಾಗ್ಯವಾಗಿ ಬದಲಿಸುವ ಅವಶ್ಯಕತೆಯಿದೆ. ಕಷ್ಟ ನಿಜವಾಗಿಯೂ ದೂರ ಮಾಡಬೇಕೆನ್ನುವ ಇಚ್ಛೆ ಹೊಂದಿದ್ದರೆ, ಬೇರೆಯವರಿಗೆ ಉಪಕಾರ ಮಾಡಿ. ನಿಮ್ಮ ಕಷ್ಟ ತನ್ನಿಂತಾನೇ ದೂರವಾಗುವುದು.

ಬೇರೆಯವರಿಗೆ ಅಪಕಾರ ಮಾಡಿದರೆ ನಮ್ಮ ಕಷ್ಟ ದೂರವಾಗುತ್ತದೆ ಎಂದರೆ ಸಾಧ್ಯವಿಲ್ಲ. ನಿಮಗೆ ಪೂಜೆ-ಪುನಸ್ಕಾರ, ಪ್ರಾರ್ಥನೆ ಮಾಡಲಾಗುವುದಿಲ್ಲ. ದಾನ ಮಾಡಲಾಗುವುದಿಲ್ಲ. ದಯೆ ತೋರಲಾಗುವುದಿಲ್ಲ. ಧರ್ಮ ಅನುಸರಿಸಲು ಆಗುವುದಿಲ್ಲ. ಹೀಗಿದ್ದರೂ ಬೇರೆಯವರ ಕಷ್ಟವನ್ನು ದೂರ ಮಾಡಿ, ಬೇರೆಯವರಿಗೆ ಒಳಿತು ಮಾಡಿರಿ. ಉಪಕಾರ ಮಾಡುತ್ತೀರಿ. ಆಗ, ನಿಮ್ಮೆಲ್ಲ ಕಷ್ಟ ದೂರವಾಗುವುದು. ನಿಮಗೆ ಒಳಿತಾಗುವುದು. 

ನನ್ನ ಕಲ್ಯಾಣಕ್ಕಾಗಿ ಕಾಡಿನಲ್ಲಿ ಕಠೋರವಾದ ತಪಸ್ಸು, ಸಾಧನೆ ಮಾಡುತ್ತಿರುತ್ತೇನೆ. ನಿಮ್ಮ ನಡುವೆ ಬಂದಾಗ ಸಾಧನೆಯ ಸಾರವನ್ನು, ಎಲ್ಲ ಪುಣ್ಯವನ್ನು ಎಲ್ಲ ಜೀವಿಗಳಿಗೆ ಹಂಚುವೆನು. ನನ್ನ ಸಾಧನೆಯ ಸಾರ ಪಡೆಯಿರಿ. ನನ್ನೆಲ್ಲ ಪುಣ್ಯ ಪಡೆದುಕೊಳ್ಳಿ. ದುಃಖದಿಂದ ಮುಕ್ತಿ ಪಡೆಯಿರಿ.

ಮೇಲೆ ಕಾಡಿಗೆ ಹೋದಾಗ ಸಿದ್ಧ ಭಗವಂತರ ಜತೆ ಮಾತನಾಡುವೆ. ಸಿದ್ಧರೊಳಗೆ ಒಂದಾಗುವೆ. ಸಂಸಾರ ಮರೆಯುವೆ. ಮತ್ತೆ ಕೆಳಗೆ ಬಂದಾಗ ನಿಮ್ಮ ರೂಪ, ಬಣ್ಣ, ಬಟ್ಟೆ-ಬರೆ ಇವುಗಳನ್ನಲ್ಲ, ನಿಮ್ಮ ಭಾವ, ಭಾಷೆಯಲ್ಲಿ ನಿಮ್ಮೊಳಗಿರುವ ಭಗವಂತನನ್ನು ನೋಡುವೆ. ನಿಮ್ಮ ಒಳಿತು, ಸಂತೋಷಕ್ಕಾಗಿ ಮತ್ತು ಕಷ್ಟಗಳು ದೂರವಾಗಲೆಂದು ಕಾಡಿನಿಂದ ಹೊರಗೆ ಬರುತ್ತೇನೆ. ನಿಜವಾಗಿ ಹೇಳಬೇಕೆಂದರೆ, ಆ ಲೌಕಿಕತೆಯನ್ನು ಬಿಟ್ಟು ಈ ಲೌಕಿಕತೆಗೆ ಬರುವುದೆಂದರೆ ಸ್ವಲ್ಪ ಕಷ್ಟವೇ. ಆದರೆ, ನಿಮ್ಮ ಕಲ್ಯಾಣದ ಭಾವನೆಯಿಂದ ಸಾಧನೆಗಳನ್ನು ಬಿಟ್ಟು ನಿಮ್ಮ ನಡುವೆ ಬರುತ್ತೇನೆ.

ಸಂತರ ಮಹಿಮೆ, ಅವರ ಭಾವನೆ, ಸಾಮರ್ಥ್ಯ ಸಾಮಾನ್ಯ ವ್ಯಕ್ತಿಗಳಿಗೆ ತಿಳಿಯಲಾಗುವುದಿಲ್ಲ. ಭಗವಾನ್ ಪಾರ್ಶ್ವನಾಥರು 10 ಭವಗಳಲ್ಲಿ ಕಮಠನ ಉಪಸರ್ಗವನ್ನು ಸಹಿಸಿದರು. ಎಂದೂ ಅವನಿಗೆ ಕಷ್ಟ ನೀಡಲು ಯೋಚಿಸಲಿಲ್ಲ. ಬದಲಿಗೆ ಕಮಠನ ಲಾಭವನ್ನೇ ಚಿಂತಿಸಿದರು. ನಾವು ಬೇರೆಯವರಿಗೆ ಅಪಕಾರ ಮಾಡುತ್ತ ಬಂದಿದ್ದೇವೆ. ಇದೇ ನಮ್ಮ ಕಷ್ಟಕ್ಕೆ ಕಾರಣ.

ದುಃಖದ ಮಾತು ಎಂದರೆ, ಇಂದು ಮನುಷ್ಯನೇ ಮನುಷ್ಯನಿಗೆ ಉಪಕಾರ ಮಾಡಲು ಬಯಸುತ್ತಿಲ್ಲ. ಇನ್ನು ಬೇರೆ ಪ್ರಾಣಿಗಳ ವಿಷಯವನೇನು? ಹಿಂದಿನವರ, ಇಂದಿನವರ ಯೋಚನೆಯಲ್ಲಿ ಬಹಳ ಅಂತರವಿದೆ. ಮಹಾಪುರುಷರು ಪ್ರತಿ ಹೆಜ್ಜೆಗೂ ಬೇರೆಯವರಿಗೆ ಉಪಕಾರ ಮಾಡುತ್ತಿರುತ್ತಾರೆ. ಬೇರೆಯವರ ಕಷ್ಟ ಪರಿಹರಿಸಿದರೂ ಪ್ರತ್ಯುಪಕಾರ ಬಯಸುವುದಿಲ್ಲ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತಾರೆ. ತನಗಾಗಿ ಒಳಿತು ಮಾಡುವವ ಎಂದೂ ಸುಖಿಯಾಗಿರಲಾರ, ಸಂತುಷ್ಟನಾಗಲಾರ, ಸಶಕ್ತನಾಗಿರಲಾರ, ಸದೃಢನಾಗಿರಲಾರ.

ಪ್ರತ್ಯುಪಕಾರ ಬಯಸದೇ ಮತ್ತೊಬ್ಬರಿಗೆ ಸಹಾಯ ಮಾಡುವವರು ಪರಮಾತ್ಮರಾಗುತ್ತಾರೆ. ನಾವು ಒಬ್ಬರಿಗೊಬ್ಬರು ಉಪಕಾರ ಮಾಡೋಣ, ಅಪಕಾರವನ್ನಲ್ಲ. ಇದೇ ಪರಮಾರ್ಥವಾಗಿದೆ.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...