ಡಿ.ಎಂ.ಮಹೇಶ್, ದಾವಣಗೆರೆ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ, 2000 ರೂ. ನೀಡಿಕೆಯ ಗೃಹಲಕ್ಷಿ ಯೋಜನೆಗಳ ಚರ್ಚೆ ಬಳಿಕ ಅನ್ನಭಾಗ್ಯದ ಸರದಿ ಶುರುವಾಗಿದೆ. ಹಣದ ಯಜಮಾನಿಕೆಗೂ ಕೆಲವು ಮನೆಗಳಲ್ಲಿ ಹೊಸ ಕರಾರುಪತ್ರ ತಯಾರಾಗುತ್ತಿದೆ!
ಅಂತ್ಯೋದಯ, ಬಿಪಿಎಲ್ ಸೇರಿ ದಾವಣಗೆರೆ ಜಿಲ್ಲೆಯಲ್ಲಿ 13,29,850 ಮಂದಿ ಪಡಿತರ ಫಲಾನುಭವಿಗಳಿದ್ದಾರೆ. ಒಟ್ಟು 3,78,618 ಪಡಿತರ ಕುಟುಂಬಗಳಿದ್ದು ಎಲ್ಲರ ಕಣ್ಣು ಇದೀಗ ಅನ್ನಭಾಗ್ಯದ ಹಣದತ್ತ ಹರಿದಿದೆ!
ಸರ್ಕಾರ ಹಣ ಜಮೆ ಹೇಗೆ ಮಾಡುತ್ತದೆ? ಕಾರ್ಡ್‌ದಾರರು ಏನು ಮಾಡಬೇಕು? ಹಣ ಜಮೆ ಒಬ್ಬರ ಹೆಸರಿಗೆ ಆಗುವುದಾದಲ್ಲಿ ಅವರ ಮೊಬೈಲ್ ನಂಬರ್ ಲಿಂಕ್ ಆಗಿರಬೇಕಾ? ಹಣ ಬಂದಿದ್ದು ಖಾತ್ರಿ ಪಡಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳು ಈಗಾಗಲೆ ಜಿಲ್ಲೆಯಾದ್ಯಂತ ಓಡಾಡುತ್ತಿವೆ.
ಆನ್‌ಲೈನ್‌ನಲ್ಲೇ ಸಾರ್ವಜನಿಕ ಪಡಿತರ ಫಲಾನುಭವಿಗಳ ಮಾಹಿತಿ ಇದೆ. ಅಲ್ಲದೆ ಎಲ್ಲ ಕಾರ್ಡ್‌ದಾರರು ಆಧಾರ್ ಲಿಂಕ್ ಆಗಿರುವುದರಿಂದ ಆಯಾ ಕುಟುಂಬದ ಬ್ಯಾಂಕ್ ಖಾತೆ ಕೂಡ ಸೀಡಿಂಗ್ ಆಗಿರುತ್ತದೆ. ಹೀಗಾಗಿ ಕಾರ್ಡ್‌ದಾರರಿಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಮಾಡುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಈ ಯೋಜನೆಯಲ್ಲೂ ಮನೆ ಯಜಮಾನಿ ಖಾತೆಗೆ ಹಣ ಜಮೆ ಆಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಪಡಿತರ ಕುಟುಂಬಗಳಲ್ಲಿ ಅತ್ತೆ- ಸೊಸೆಯಂದಿರ ನಡುವೆಯೂ ಹೊಸ ತಕರಾರು, ಚರ್ಚೆ ಶುರುವಾಗಿದೆ! ಗೃಹಲಕ್ಷ್ಮಿ ಹಣ ಬಂದಲ್ಲಿ ಅತ್ತೆಗೆ ಮೀಸಲಿರಲಿ, ಅನ್ನಭಾಗ್ಯ ಮೊತ್ತ ನಮಗಿರಲಿ ಎಂಬ ಹೊಸ ಕರಾರನ್ನು ಸೊಸೆಯಂದಿರು ಮನೆಗಳ ಹಂತದಲ್ಲೇ ನಡೆಸಿದ್ದಾರೆ ಎನ್ನಲಾಗುತ್ತಿದೆ !
* ಬಾಕ್ಸ್
* ಜಿಲ್ಲೆಗೆ ಬೇಕು 22.60 ಕೋಟಿ ರೂ.!
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪಡಿತರದಾರರಿಗೆ ಐದು ಕೆ.ಜಿ ಅಕ್ಕಿ/ ರಾಗಿ ವಿತರಣೆ ಅಬಾಧಿತ. ಆದರೆ, ರಾಜ್ಯ ಸರ್ಕಾರ ನೀಡಬೇಕಿದ್ದ ತಲಾ 5 ಕೆಜಿ ಆಹಾರಧಾನ್ಯ ಬದಲಾಗಿ ಕೆಜಿಗೆ 34 ರೂ.ನಂತೆ ಮಾಸಿಕ 170 ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಅದರಂತೆ ಜಿಲ್ಲೆಗೆ ತಿಂಗಳೊಂದಕ್ಕೆ ಅಂದಾಜು 22,60,74,500 ರೂ. ಹಂಚಿಕೆ ಮಾಡಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 45705 ಅನ್ನ ಅಂತ್ಯೋದಯ ಯೋಜನೆ ಕಾರ್ಡ್‌ಗಳಿದ್ದು ಒಟ್ಟು 1,94,032 ಮಂದಿ ತಲಾ ಕುಟುಂಬಕ್ಕೆ 35 ಕೆಜಿ ಅಕ್ಕಿ ನೀಡಲಾಗುತ್ತಿದೆ. 3,32,913 ಬಿಪಿಎಲ್ (ಪಿಎಚ್‌ಎಚ್) ಕಾರ್ಡ್‌ಗಳಿದ್ದು, 11,35,818 ಮಂದಿ ಪಡಿತರದಾರರಿದ್ದಾರೆ.
ಗ್ಯಾರಂಟಿ ಘೋಷಣೆಯಂತೆ ರಾಜ್ಯ ಸರ್ಕಾರ ಅಂದಾಜು 72,205 ಮೆಟ್ರಿಕ್ ಟನ್ ಅಕ್ಕಿ ಪೂರೈಸುವ ಬೇಡಿಕೆ ಇತ್ತು. ಆದರೆ ಅಕ್ಕಿ ಹೊಂದಾಣಿಕೆಯಾಗದ್ದರಿಂದ ಹಣ ನೀಡಲು ಸರ್ಕಾರ ನಿಶ್ಚಯಿಸಿದೆ. ಆದರೂ ಇದರ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಆಹಾರ ಇಲಾಖೆ ಅಧಿಕಾರಿಗಳ ಜತೆ ಯಾವೊಂದೂ ಸಭೆ ನಡೆದಿಲ್ಲ. ಪಡಿತರದಾರರು ಅಧಿಕಾರಿಗಳು-ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
—
* ಕೋಟ್
ಆಹಾರಧಾನ್ಯದ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಈ ಬಗ್ಗೆ ನಿರ್ದೇಶನ ಬಂದಿಲ್ಲ. ಆಹಾರಧಾನ್ಯ ವಿತರಣೆಗೆ ತಿಂಗಳಿಡೀ ಅವಕಾಶ ಇರುವುದರಿಂದ ಹಣ ಜಮೆ ಕೂಡ ಅಷ್ಟರೊಳಗೆ ಆಗಬಹುದು.
ರವಿ
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಡಿಡಿ. ದಾವಣಗೆರೆ.
—
ಅನ್ನಭಾಗ್ಯ ಹಣವೂ ಮನೆಯೊಡತಿಗಾ..? ದಾವಣಗೆರೆ ಮನೆಗಳಲ್ಲಿ ಚರ್ಚೆ ಶುರು
ಬೆಳಗ್ಗೆ ಹೊತ್ತು ವಾಲ್ನಟ್ಸ್ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts
ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…
ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!
| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…