ಅನುಷ್ಕಾ ಕೀ ಚೈನ್ ಬೆಲೆ 20 ಸಾವಿರ ರೂ. !

ಬಾಲಿವುಡ್ ಸ್ಟಾರ್​ಗಳು ದುಬಾರಿ ಬೆಲೆಯ ಉಡುಗೆ ತೊಟ್ಟು ಸುದ್ದಿಯಾಗುವುದು ಸರ್ವೆ ಸಾಮಾನ್ಯ. ಈಚೆಗೆ ಜಿಮ್ೆ ಕರೀನಾ 45 ಸಾವಿರ ರೂ. ಮೌಲ್ಯದ ಶರ್ಟ್ ಧರಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ನಟಿ ಅನುಷ್ಕಾ ಶರ್ಮಾ ಸರದಿ. ಹಾಗಂತ ಅವರು ಸುದ್ದಿಯಾಗಿದ್ದು ಡ್ರೆಸ್ ವಿಚಾರದಲ್ಲಲ್ಲ. ಬದಲಿಗೆ, ಕೀ ಚೈನ್ ಮೂಲಕ! ಯಾಕೆಂದರೆ, ಆ ಕೀ ಬಂಚ್ ಬೆಲೆ ಬರೋಬ್ಬರಿ 20 ಸಾವಿರ ರೂ.!!

ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಸಿಂಪಲ್ ಉಡುಗೆ ತೊಟ್ಟಿದ್ದ ಅನುಷ್ಕಾ, ಹೆಗಲಿಗೆ ಬ್ಯಾಗ್ ಹಾಕಿದ್ದರು. ಬ್ಯಾಗ್​ಗೆ

ಹಾಕಿದ್ದ ಬ್ರಾ್ಯಂಡೆಡ್ ಕೀ ಚೈನ್​ಎಲ್ಲರ ಗಮನ ಸೆಳೆದಿದೆ. ಇದೇ ಮಾದರಿಯ ಕೀ ಚೈನ್ ಮೌಲ್ಯ ಪತ್ತೆ ಮಾಡಿದವರು ರೇಟ್ ಕಂಡು ಹೌಹಾರಿದ್ದಾರೆ. ಏಕೆಂದರೆ ಅದರ ಮೌಲ್ಯ, 305 ಡಾಲರ್. ಅದನ್ನು ರೂಪಾಯಿಗೆ ಬದಲಾಯಿಸಿದರೆ 20,840 ರೂ. ಆಗುತ್ತದೆ.

ಈ ವಿಚಾರ ಟ್ವಿಟರ್​ನಲ್ಲಿ ಸದ್ಯ ಚರ್ಚೆಯಲ್ಲಿದೆ. ‘ಅನುಷ್ಕಾ ಕೀ ಚೈನ್ ಆಕರ್ಷಕವಾಗಿದೆ’ ಎಂದು ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು, ಹಾಸ್ಯ ಚಟಾಕಿ ಹಾರಿಸಿದ್ದಾರೆ. ‘ಅನುಷ್ಕಾ ಕೀ ಬಂಚ್ ಹಣದಲ್ಲಿ ಶ್ರೀಲಂಕಾ ಟ್ರಿಪ್ ಮುಗಿಸಿ ಬರಬಹುದು’ ಎಂದು ಕೆಲವರು ನಕ್ಕಿದ್ದಾರೆ. ಸದ್ಯ ಅವರು ‘ಸಂಜು’, ‘ಸುಯಿ ಧಾಗಾ: ಮೇಡ್ ಇನ್ ಇಂಡಿಯಾ’ ಹಾಗೂ ‘ಝೀರೋ’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ‘ಸಂಜು’ವಿನಲ್ಲಿ ಅನುಷ್ಕಾ ಭಿನ್ನ ಅವತಾರ ತಾಳಿರುವುದು ಕುತೂಹಲ ಮೂಡಿಸಿದೆ. ಇದೇ 29ರಂದು

ಚಿತ್ರ ತೆರೆಕಾಣುತ್ತಿದೆ.-ಏಜೆನ್ಸೀಸ್

Leave a Reply

Your email address will not be published. Required fields are marked *