ಅನಿಲ್ ಬಯೋಪಿಕ್ ಬೋರಿಂಗ್!

‘ಬಯೋಪಿಕ್ ಅಂದ್ರೆ ಅಲ್ಲಿ ಕಾಂಟ್ರವರ್ಸಿಗಳಿರಬೇಕು. ಆದರೆ ನನ್ನದು ವಿವಾದಗಳಿರದ ಬದುಕು. ಹಾಗಾಗಿ ನನ್ನ ಬಯೋಪಿಕ್ ಮಾಡಿದರೆ, ಯಾರಿಗೂ ಅದು ರುಚಿಸದು’- ಹೀಗೆ ಹೇಳಿಕೊಂಡವರು ಬಾಲಿವುಡ್​ನ ಹಿರಿಯ ನಟ ಅನಿಲ್ ಕಪೂರ್.

ಇತ್ತೀಚಿನ ದಿನಗಳಲ್ಲಿ ಬಯೋಪಿಕ್​ಗೆ ಹೆಚ್ಚಿನ ಬೇಡಿಕೆ ಬಂದಿದೆ. ಸ್ಟಾರ್ ನಟ-ನಟಿಯರ ಜೀವನಾಧರಿಸಿ ಬಂದ ಹಲವು ಸಿನಿಮಾಗಳು ಹಿಟ್ ಆಗುತ್ತಿವೆ. ಕಮರ್ಷಿಯಲ್ ಆಗಿ ಗಳಿಕೆ ಮಾಡುವುದರ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಪಾತ್ರವಾಗುತ್ತಿ್ತೆ. ಹೀಗಿರುವಾಗ ಕಾರ್ಯಕ್ರಮವೊಂದರಲ್ಲಿ ಬಯೋಪಿಕ್ ಬಗ್ಗೆ ಪ್ರಶ್ನೆಯೊಂದು ಕೇಳಿಬಂದಿತ್ತು. ಅದಕ್ಕೆ ಉತ್ತರಿಸಿರುವ ಅನಿಲ್ ಕಪೂರ್. ‘ನನ್ನ ಬಯೋಪಿಕ್ ನಿರ್ವಣವಾದರೆ, ಅದನ್ನು ಯಾರೂ ನೋಡುವುದಿಲ್ಲ. ಅದು ತುಂಬ ಬೋರಿಂಗ್ ಆಗಿರಲಿದೆ. ಯಾಕೆಂದರೆ, ಕಲರ್​ಫುಲ್ ವಿವಾದಗಳು ನನ್ನ ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ಘಟಿಸಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಅನಿಲ್ ಕಪೂರ್ ನಟನೆಯ ‘ಫನ್ನೇ ಖಾನ್’ ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿತ್ತು. ಕಲೆಕ್ಷನ್ ವಿಚಾರದಲ್ಲಿ ಚಿತ್ರ ಹೀನಾಯವಾಗಿ ಸೋತಿದೆ.

Leave a Reply

Your email address will not be published. Required fields are marked *