ಮುಂಡಗೋಡ: ಪಟ್ಟಣದಲ್ಲಿ ಅನಾವಶ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬುಧವಾರ ಪೊಲೀಸ್ ಠಾಣೆಯ ಎದುರು ತಡೆದು ತಡೆದು ದಂಡ ವಿಧಿಸಿದರು.
40 ಜನ ಬೈಕ್ ಸವಾರರಿಗೆ ಸುಮಾರು 20ಸಾವಿರ ರೂ. ದಂಡ ಹಾಕಿ ವಿನಾಕಾರಣ ಬೈಕ್ ಮೇಲೆ ಓಡಾಡಿದರೆ ಬೈಕ್ ಜಪ್ತಿ ಮಾಡಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು.
ಅಲ್ಲದೆ, ಮಧ್ಯಾಹ್ನ 1 ಗಂಟೆಯಾಗಿದ್ದರೂ ಅಂಗಡಿ ಬಂದ್ ಮಾಡದೇ ಇದ್ದ ಅಂಗಡಿಕಾರರಿಗೆ ಗೃಹ ರಕ್ಷಕದಳದ ಸಿಬ್ಬಂದಿ ಲಾಠಿ ತೋರಿಸಿ ಅಂಗಡಿಯನ್ನು ಬಂದ್ ಮಾಡಿಸಿದರು.
ಚೆಕ್ಪೋಸ್ಟ್ಗಳಲ್ಲಿ ಬಿಗಿ ತಪಾಸಣೆ: ಹಾವೇರಿ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಗಡಿ ಭಾಗದ ಚೆಕ್ಪೋಸ್ಟ್ಗಳಲ್ಲಿ ಬುಧವಾರದಿಂದ ಇನ್ನಷ್ಟು ಬಿಗಿ ತಪಾಸಣೆ ಕೈಗೊಳ್ಳಲಾಗಿದೆ.
ಪಟ್ಟಣದ ಜನರು ಹೆಚ್ಚಾಗಿ ಹಾವೇರಿ ಜಿಲ್ಲೆಗೆ ತರಕಾರಿ ಮತ್ತು ವೀಳ್ಯದೆಲೆ ತರಲು ಹೋಗುತ್ತಾರೆ. ಈ ವೇಳೆ ಪಾಸ್ ಸಿಗದ ಕೆಲವರು ಕಳ್ಳ ದಾರಿಗಳಲ್ಲಿಯೂ ಹೋಗದಂತೆ ಜಾಗೃತಿ ವಹಿಸಲಾಗಿದೆ. ಆದ್ದರಿಂದ ತಾಲೂಕಿನ ಗಡಿ ಭಾಗದ ಜೇನಮುರಿ, ಸನವಳ್ಳಿ, ಹಳೇ ನ್ಯಾಸರ್ಗಿ, ಬಾಚಣಕಿ ಚೆಕ್ಪೋಸ್ಟ್ಗಳಲ್ಲಿ ಇನ್ನಷ್ಟು ಬಿಗಿ ಮಾಡಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.