ವಿಜಯಪುರ : ವಿನಾಕಾರಣ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬೇರ್ಪಡಿಸಲಾಗಿದೆ. ಇದೇ ತೆರನಾಗಿ ಅನೇಕ ಇಲಾಖೆಗಳನ್ನು ಬೇರ್ಪಡಿಸಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಅಧಿಕಾರ ಹಂಚಿಕೆ ಮಾಡಲು ಇಲಾಖೆಯನ್ನು ಒಡೆಯಲಾಗಿದೆ. ಸಹಕಾರ ಇಲಾಖೆಯಲ್ಲಿದ್ದ ಸಕ್ಕರೆ ವಿಭಾಗವನ್ನು ಬೇರೆ ಮಾಡಿ ಪ್ರತ್ಯೇಕ ಸಚಿವಾಲಯ ತೆರೆದರು ಇದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿ.ಹಾರನಹಳ್ಳಿ ರಾಮಸ್ವಾಮಿ ಅವರ ವರದಿ ಇಲಾಖೆಗಳನ್ನು ಸಮನ್ವಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ, ಆದರೂ ಸಹ ಯಾರೇ ಬಂದರೂ ಇದಕ್ಕೆ ಆದ್ಯತೆ ನೀಡುತ್ತಿಲ್ಲ. ಕೇವಲ ಐದು ವರ್ಷ ಸರ್ಕಾರ ಪೂರೈಸಿದರೆ ಸಾಕು ಅದೇ ದೊಡ್ಡ ಸಾಧನೆ ಎಂದು ಅಷ್ಟಕ್ಕೆ ಸೀಮಿತವಾಗುತ್ತಿದ್ದಾರೆ.
- ಉಚಿತ ಕರೊನಾ ಲಸಿಕೆ ಬಿಜೆಪಿಯ ಸಣ್ಣತನ
ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ಪ್ರಣಾಳಿಕೆಯಲ್ಲಿ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಬಿಜೆಪಿ ಘೋಷಣೆ ಮಾಡಿರುವುದು ಬಿಜೆಪಿಯ ಸಣ್ಣತನಕ್ಕೆ ಉದಾಹರಣೆ ಎಂದು ಶಾಸಕ ಶಿವಾನಂದ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಕರೊನಾದಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಕೊಡುವುದನ್ನು ಬಿಟ್ಟು ಕೇವಲ ಅಧಿಕಾರಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್‌ಗೆ ನೀಡಿದ ಆದ್ಯತೆಯಷ್ಟು ನಾನ್ ಕೋವಿಡ್ ರೋಗಗಳಿಗೆ ಆದ್ಯತೆ ದೊರಕಿಸುತ್ತಿಲ್ಲ. ಕ್ಯಾನ್ಸರ್, ಕಿಡ್ನಿ ವೈಲ್ಯ, ಮಧುಮೇಹ ಮೊದಲಾದ ರೋಗ ಸಮಸ್ಯೆ ಎದುರಿಸುತ್ತಿರುವ ಬಡ ರೋಗಿಗಳು ಎಲ್ಲಿ ಹೋಗಿ ಚಿಕಿತ್ಸೆ ಪಡೆಯಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.