ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತಸಂಘ ಕಿಡಿ

ಗೌರಿಬಿದನೂರು: ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಆರ್. ರವಿಚಂದ್ರರೆಡ್ಡಿ ಕಿಡಿಕಾರಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಾಲೂಕಿನ ಮೇಳ್ಯಾ ಗ್ರಾಪಂ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡದರು.

ದಿನ್ನೆಹುಣಸೇನಹಳ್ಳಿ ಸರ್ವೆ ನಂ.170ರ 7 ಎಕರೆ 7 ಗುಂಟೆ ಗ್ರಾಮಠಾಣಾ ಜಮೀನನ್ನು ನಿವೇಶನ ರಹಿತರಿಗೆ ಹಂಚಬೇಕು, ಎಲ್ಲ ಗ್ರಾಮಗಳಲ್ಲಿ ಒತ್ತವರಿಯಾಗಿರುವ ಸ್ಮಶಾನಗಳ ಒತ್ತುವರಿ ತೆರವು, ಸ್ಥಳೀಯ ಕೋಳಿ ಫಾರಂಗಳಿಂದ ಕರ ವಸೂಲಿ, ಮರಿಪಡಗು ಓವರ್ ಹೆಡ್ ಟ್ಯಾಂಕರ್​ನಿಂದ ಗ್ರಾಮಕ್ಕೆ ನೀರು ಸರಬರಾಜು, ಮೇಳ್ಯಾ ಕೆರೆಯಲ್ಲಿನ ಮರಗಳ ಅಕ್ರಮ ಸಾಗಣೆ ತಡೆಯುವಂತೆ ಒತ್ತಾಯಿಸಿದರು.

ಗ್ರಾಮದ ಹಳೆ ಧರ್ಮಛತ್ರ ತೆರವು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಪಂನಲ್ಲಿ ಅಧಾರ್ ನೋಂದಣಿ ಕೇಂದ್ರ ಪ್ರಾರಂಭಿಸುವಂತೆ ಅಗ್ರಹಿಸಿದರು.

ಗ್ರಾಮದ ಚರಂಡಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಕೊಳಚೆ ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿದೆ, ಚರಂಡಿಗಳು ಸೊಳ್ಳೆ ಉತ್ಪತ್ತಿಯ ತಾಣಗಳಾಗಿದ್ದು, ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ರೈತ ಸಂಘದ ಕಾರ್ಯದರ್ಶಿ ಅರ್.ಎನ್.ರಾಜು ಕಿಡಿಕಾರಿದರು.

ಮುಖಂಡರಾದ ಚೀಗಟಗೆರೆ ಶ್ರೀನಿವಾಸ್, ಶಾನವಾಜ್ ಬಾಷಾ, ರಾಮಚಂದ್ರರೆಡ್ಡಿ, ಎದ್ದಲುರೆಡ್ಡಿ, ಅಂಜಿನಪ್ಪ, ನಂಜೇಗೌಡ, ರಮನಾಂದ ರೆಡಿ, ಹನುಮಂತಪ್ಪ, ವೆಂಕೇಟಶ್, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *