ಅಧಿಕಾರಿಗಳ ತಂಡ ಸರ್ವ ಸನ್ನದ್ಧ

ಹಿರೇಕೆರೂರ: ತಾಲೂಕಿನಲ್ಲಿ ಸುಗಮ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಅಧಿಕಾರಿಗಳ ತಂಡ ಎಲ್ಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ತಾಲೂಕಿನ ಎಲ್ಲ ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿಗೆ, ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ಮತಯಂತ್ರ, ವಿವಿ ಪ್ಯಾಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಶೇ. 100ರಷ್ಟು ಮತದಾನ ಗುರಿ ಸಾಧನೆಗೆ ಈಗಾಗಲೇ ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ. ರಟ್ಟಿಹಳ್ಳಿ, ಹಿರೇಕೆರೂರ ತಾಲೂಕು ಸೇರಿ 1,82,815 ಮತದಾರರಿದ್ದಾರೆ. ತಾಲೂಕಿನಲ್ಲಿ ಮತದಾನಕ್ಕಾಗಿ ಹಿರೇಕೆರೂರ ಪಪಂ ಹಾಗೂ ದೂದಿಹಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2 ಪಿಂಕ್ ಮತಗಟ್ಟೆ, ಪಟ್ಟಣದ ತಾಪಂ ಕಚೇರಿಯಲ್ಲಿ 1 ಮಾದರಿ ಮತಗಟ್ಟೆ ಸೇರಿ 229 ಮತಗಟ್ಟೆ ಸ್ಥಾಪಿಸಲಾಗಿದ್ದು, 46 ಸೂಕ್ಷ್ಮ, 183 ಸಾಮಾನ್ಯ ಮತಗಟ್ಟೆಗಳಿವೆ. 1 ಮತಗಟ್ಟೆಗೆ 4ರಂತೆ 904 ಸಿಬ್ಬಂದಿ ನೇಮಿಸಲಾಗಿದೆ. 1,100 ಮತಗಳಿದ್ದಲ್ಲಿ ಹೆಚ್ಚುವರಿಯಾಗಿ ಒಬ್ಬ ಅಧಿಕಾರಿ ನೇಮಿಸಲಾಗಿದೆ. 10 ಮತಗಟ್ಟೆಗಳಿಗೆ ಒಬ್ಬರಂತೆ 26 ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ಬಂದೋಬಸ್ತ್:
ಮತದಾನ ದಿನ ಬಂದೋಬಸ್ತ್​ಗಾಗಿ 1 ಡಿವೈಎಸ್ಪಿ, 3 ಸಿಪಿಐ, 5 ಪಿಎಸ್​ಐ, 14 ಎಎಸ್​ಐ, 41 ಮುಖ್ಯ ಪೇದೆ, 123 ಪೇದೆ, 150 ಹೋಮ್ಾರ್ಡ್, 3 ಡಿಆರ್ ತುಕಡಿ, 1 ಕೆಎಸ್​ಆರ್​ಪಿ, ಸಿಎಟಿಎಫ್ 20 ಮಿಲಿಟರಿ ಸಿಬ್ಬಂದಿ ನೇಮಿಸಲಾಗಿದೆ ಎಂದು ಸಿಪಿಐ ಮಂಜುನಾಥ ಪಂಡಿತ್ ತಿಳಿಸಿದರು.

ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ತಾ.ಪಂ. ಇಒ ಸಂತೋಷಕುಮಾರ ತಳಕಲ್, ಎನ್. ಸುರೇಶಕುಮಾರ, ಪಿ.ಬಿ.ನಿಂಗನಗೌಡ್ರ, ಬಿ.ಜೆ. ವಿಜಯಕುಮಾರ, ಕೆ.ಸಿ. ಯತ್ತಿನಮನಿ, ಪ್ರೊ. ಎಸ್.ಪಿ. ಗೌಡರ್, ಅಭಿಲಾಷ್, ನಾಗರಾಜ ಕಟ್ಟಿಮನಿ, ಅರುಣ ಕಾರಗಿ, ಎಚ್.ವೈ. ಕೊಪ್ಪದ, ಮೇಘರಾಜ ಮಾಳಗಿಮನಿ, ರಾಘವೇಂದ್ರ ಹಂಚಿನಮನಿ, ಇತರರು ಇದ್ದರು.

Leave a Reply

Your email address will not be published. Required fields are marked *