ಅಧಿಕಾರಿಗಳಿಂದ ಗೋಕರ್ಣ ಅವ್ಯವಸ್ಥೆ ವೀಕ್ಷಣೆ

ಗೋಕರ್ಣ: ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಹಲವು ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾನುವಾರ ಇಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ರ್ಪಾಂಗ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಯಿತು. ಮೇಲಿನ ಕೇರಿಯಿಂದ ಸಮುದ್ರ ತೀರದವರೆಗೆ, ಏಕ ಮುಖ ಸಂಚಾರ ರಸ್ತೆಯಲ್ಲಿ ಹಾಗೂ ಮಂದಿರದ ಸುತ್ತ ರ್ಪಾಂಗ್ ನಿಷೇಧಿಸಲಾಯಿತು. ಈ ವೇಳೆ ಕೆಲ ವಾಹನ ಚಾಲಕರು, ನಾವು ಟ್ಯಾಕ್ಸ್ ತುಂಬುತ್ತಿದ್ದು, ರ್ಪಾಂಗ್​ಗೆ ಅವಕಾಶ ನೀಡಲು ವಿನಂತಿಸಿದರು. ಉತ್ತರಿಸಿದ ಅಧಿಕಾರಿಗಳು, ಟ್ಯಾಕ್ಸ್ ಮತ್ತು ರ್ಪಾಂಗ್ ಸಂಬಂಧವಿಲ್ಲ. ರಸ್ತೆ ಮೇಲೆ ವಾಹನ ಪಾರ್ಕ್ ಮಾಡಲು ಕಾನೂನಿನಲ್ಲಿ ಆಸ್ಪದವಿಲ್ಲ. ಅಗತ್ಯವಿದ್ದರೆ ಪಂಚಾಯತಿ ಸ್ಥಳದಲ್ಲಿ ರ್ಪಾಂಗ್​ಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಗಟಾರ ಆಕ್ರಮಿಸಿ ಮುಂದೆ ಬಂದ ಅಂಗಡಿ ಭಾಗಗಳನ್ನು ಕೂಡಲೇ ತೆರವು ಮಾಡುವಂತೆ ಆದೇಶಿಸಲಾಯಿತು. ಸಮುದ್ರ ತೀರದ ಸಂಗಮ ನಾಲೆ ಕಲ್ಮಷದಿಂದ ತುಂಬಿ ದುರ್ವಾಸನೆ ಬೀರುತ್ತಿದ್ದು, ಸ್ವಚ್ಛತೆಗೆ ಅಧಿಕಾರಿಗಳು ರ್ಚಚಿಸಿದರು.

ತಹಸೀಲ್ದಾರ್ ಮೇಘರಾಜ ನಾಯ್ಕ, ತಾಪಂ ಇಒ ಸಿ.ಟಿ. ನಾಯ್ಕ, ಇಂಜಿನಿಯರಿಂಗ್ ವಿಭಾಗದ ಆರ್.ಜಿ. ಗುನಗಿ ಸಿಪಿಐ ಸಂತೋಷ ಶೆಟ್ಟಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಜಾರಿಗೆ ತರುವವರಾರು?: ಈ ಹಿಂದೆ ಇದೇ ರೀತಿ ಅಧಿಕಾರಿಗಳು ಬಂದು ಅವ್ಯವಸ್ಥೆ ವೀಕ್ಷಿಸಿ, ಕ್ರಮಕ್ಕೆ ಆದೇಶಿಸಿದ್ದರು. ಆದರೆ, ಅದು ಕ್ರಮೇಣ ಮರೆಯಾಯಿತು. ಈಗ ಮಾಡಲಾದ ಕೆಲ ಆದೇಶಗಳನ್ನು ಜಾರಿಗೆ ತರುವ ಹೊಣೆಯನ್ನು ಸ್ಥಳೀಯ ಪಂಚಾಯತಿ ಮತ್ತು ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಆದರೆ, ಪೊಲೀಸರ ಅಭಾವದಿಂದ ನಿತ್ಯದ ಕೆಲಸ ನಿರ್ವಹಿಸಲು ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಹೀಗಾಗಿ ಆದೇಶ ಜಾರಿ ತರುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.