ಅಧಿಕಾರದ ಮದಕ್ಕೆ ಜನರಿಂದಲೇ ತಕ್ಕಪಾಠ

ಕನಕಪುರ: ಮಾಧ್ಯಮ ಪ್ರತಿನಿಧಿಗಳು ಡಿ.ಕೆ.ಸುರೇಶ್ ಅವರನ್ನು ನನ್ನ ಬಗ್ಗೆ ಅಭಿಪ್ರಾಯ ಕೇಳಿದರೆ ಸಿ.ಪಿ.ಯೋಗೇಶ್ವರ್ ಯಾರು? ನನಗೆ ಗೊತ್ತಿಲ್ಲ ಎನ್ನುತ್ತಾರೆ. ಇಂತಹ ಅಧಿಕಾರ ಹಾಗೂ ಹಣದ ಮದದಲ್ಲಿರುವವರಿಗೆ ಕ್ಷೇತ್ರದ ಜನತೆ ಈ ಬಾರಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಡಿ.ಕೆ.ಶಿವಕುಮಾರ್ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ತಮ್ಮನ ಗೆಲುವಿಗಾಗಿ ನನ್ನ ಸಹಕಾರ ಕೋರಿದ್ದರು. ಈಗ ಯೋಗೇಶ್ವರ್ ಯಾರು? ಎಂದು ಕೇಳುತ್ತಾರೆ. ಇದರಿಂದ ಇವರ ಮನಸ್ಥಿತಿ ತಿಳಿಯುತ್ತದೆ ಎಂದು ಚಾಟಿ ಬೀಸಿದರು.

ಜನತೆ ನಿರ್ಭಯವಾಗಿ ಮತದಾನ ಮಾಡಬೇಕೆಂಬುದು ಚುನಾವಣಾ ಆಯೋಗದ ಆಶಯ. ಹಾಗೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಯಾವೊಬ್ಬ ಮತದಾರರೂ ಡಿಕೆ ಸಹೋದರರ ದಬ್ಬಾಳಿಕೆಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.

ಜಿಲ್ಲಾಧ್ಯಕ್ಷ ರುದ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಮಾತನಾಡಿದರು. ಬೆಂಗಳೂರು ಜಿಪಂ ಅಧ್ಯಕ್ಷ ಮುನಿರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಾರಿಗೌಡ, ಮುರಳಿ, ಜಿಲ್ಲಾ ಉಪಾಧ್ಯಕ್ಷ ಎಸ್.ಆರ್. ನಾಗರಾಜು, ತಾಲೂಕು ಅಧ್ಯಕ್ಷ ಶಿವರಾಮು, ಮುಖಂಡರಾದ ರವೀಂದ್ರಬಾಬು, ಮುನಿನಿಂಗೇಗೌಡ, ನಾಗಾನಂದ, ಶಶಿಕಲಾ ಇತರರು ಇದ್ದರು.

ದೇಶಕ್ಕೆ ಹೊರಗಿನ ವರಂತೆ ಒಳಗೂ ವಿರೋಧಿಗಳಿದ್ದಾರೆ. ದೇಶ ವಿರೋಧಿಸುವವರನ್ನು ಮಟ್ಟಹಾಕಬೇಕಾಗಿದೆ. ಅದಕ್ಕಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ದೃಢ ಸಂಕಲ್ಪ ಮಾಡಬೇಕು.

| ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾಚಿ ಸಚಿವ

Leave a Reply

Your email address will not be published. Required fields are marked *