ಅದ್ದೂರಿ ಕಾರಡಗಿ ವೀರಭದ್ರೇಶ್ವರ ರಥೋತ್ಸವ

ಸವಣೂರ: ಸಾವಿರಾರು ಭಕ್ತ ಸಮೂಹದ ಮಧ್ಯೆ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಹರಹರ ಮಹಾದೇವ ಜಯಘೊಷ ಹೇಳುತ್ತ ಸ್ವಾಮಿಯ ರಥ ಎಳೆದು ಪುನೀತರಾದರು.

ಪ್ರಾತಃಕಾಲ ಗುಗ್ಗಳ ಹಾಗೂ ವಿವಿಧ ಧಾರ್ವಿುಕ ಕಾರ್ಯಗಳು ಜರುಗಿದವು. ಮೂರ್ತಿ ಮೆರವಣಿಗೆ, ಪುರವಂತರ ಒಡಪುಗಳು ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ಜಾತ್ರಾ ಮಹೋತ್ಸವಕ್ಕೆ ಮೆರುಗು ತಂದವು.

ನಂತರ ಧರ್ಮಸಭೆ ಜರುಗಿತು. ಸುಕ್ಷೇತ್ರ ಮಂತ್ರವಾಡಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.