ಅದಿರು ಸಾಗಣೆ 5 ಲಾರಿ ವಶ

blank

ಚಿತ್ರದುರ್ಗ: ಅಕ್ರಮ ಗಣಿಗಾರಿಕೆ ಆರೋಪದಡಿ ಕಬ್ಬಿಣದ ಅದಿರು ತುಂಬಿದ್ದ ಐದು ಲಾರಿಗಳನ್ನು ಶುಕ್ರವಾರ ಭೀಮಸಮುದ್ರದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಿಂಡದಹಳ್ಳಿ ಸರ್ವೆ ನಂ.38 ರಲ್ಲಿ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಅವುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದೆಂದು ಚಿತ್ರದುರ್ಗ ವಲಯ ಅರಣ್ಯಾಧಿಕಾರಿ ವಸಂತ್ ತಿಳಿಸಿದ್ದಾರೆ.
ಜಮೀನು ಮಾಲೀಕರ ದೂರು ಆಧರಿಸಿ 3 ಲಾರಿಗಳಲ್ಲಿದ್ದ ಅದಿರಿನ ಪರ್ಮಿಟ್‌ಗೆ ತಾಳೆಯಾಗುತ್ತಿಲ್ಲ. ಇನ್ನೆರಡು ಲಾರಿಗಳಲ್ಲಿದ್ದ ಅದಿರಿ ಗೆ ಪರ್ಮಿಟ್ ಇಲ್ಲದ ಕಾರಣಕ್ಕೆ ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಪಟ್ಟಾ ಜಮೀನಾಗಿರುವುದರಿಂದ, ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸಲಾಗುತ್ತದೆ. ಸ್ಥಳದಲ್ಲಿದ್ದ ಇನ್ನೂ 3 ಲಾರಿಗಳನ್ನೂ ವಶಕ್ಕೆ ಪಡೆಯಬೇಕಿದೆ. ಲಾರಿಗಳಲ್ಲಿದ್ದ ಅದಿರು ಪರ್ಮಿಟ್‌ಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಆರ್‌ಎಫ್‌ಒ ತಿಳಿಸಿದ್ದಾರೆ.


Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…